ಭಾರತ-ಅಫ್ಘಾನ್ ಮೊದಲ ಟೆಸ್ಟ್ ಟಿಕೆಟ್ ದರ ಬಿಡುಗಡೆ

ಬೆಂಗಳೂರು:

ಭಾರತ ಹಾಗೂ ಅಫ್ಘಾನಿಸ್ತಾನದ ನಡುವೆ ಜೂ.14ರಿಂದ 18ರ ವರೆಗೆ ಪ್ರಪ್ರಥಮ ಹಾಗೂ ಉದ್ಘಾಟನಾ ಟೆಸ್ಟ್ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಕೆಎಸ್ ಸಿಎ ಈ ಪಂದ್ಯದ ಟಿಕೆಟ್ ದರವನ್ನು ಘೋಷಿಸಿದ್ದು ಈ ಟಿಕೆಟ್ ಗಳು ಕೆಎಸ್ ಸಿಎ ವೆಬ್ ಸೈಟ್ ನಲ್ಲಿ ಲಭ್ಯವಿದೆ. ಟಿಕೆಟ್ ದರವು ಪಿ2 ಸ್ಟ್ಯಾಾಂಡ್ ಗೆ ಒಂದು ದಿನಕ್ಕೆ 2000 ರು., ಪಿ ಕಾರ್ಪೋರೇಟ್ ಗೆ 1250 ರು., ಪಿ. ಟೆರೇಸ್ ಗೆ 1000 ರು., ಪಿ.1 ಅನ್ನೆಕ್ಸ್ ಸ್ಟಾಾಂಡ್ ಗೆ 1000 ರು., ಇ ಎಕ್ಸಿಕ್ಯೂಟಿವ್ ಗೆ 400, ಡಿ. ಕಾರ್ಪೋರೇಟ್ ಗೆ 300 ರು., ಬಿ. ಲೋವರ್ ಸ್ಟ್ಯಾಾಂಡ್ ಗೆ 300 ರು., ಎನ್. ಸ್ಟ್ಯಾಾಂಡ್ ಗೆ 500 ರು., ಜಿ. ಲೋವರ್ 1 ಸ್ಟ್ಯಾಾಂಡ್ ಗೆ 50 ರು. ಹಾಗೂ ಎಂ4 ಸ್ಟ್ಯಾಾಂಡ್ ಗೆ 100 ರು. ನಿಗದಿ ಮಾಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ