
ಕುಣಿಗಲ್, ಜೂ. 7-ಸಾರ್ವಜನಿಕವಾಗಿ ಮಾರಕಾಸ್ತ್ರಗಳನ್ನು ಹಿಡಿದು ಓಡಾಡುತ್ತಿದ್ದ ಮೂವರು ಯುವಕರನ್ನು ಗ್ರಾಮಸ್ಥರೇ ಹಿಡಿದು ಥಳಿಸಿ ಪೆÇಲೀಸರಿಗೆ ಒಪ್ಪಿಸಿರುವ ಘಟನೆ ಹಿರಿಯೂರು ಮಾರ್ಗ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಂಡ್ಯ ಮೂಲದ ಅರಕೇಶ್, ಗೋಪಾಲ, ಮಂಜ ಬಂಧಿತ ಯುವಕರು.
ನಿನ್ನೆ ಸಂಜೆ ತಾಲೂಕಿನ ಕಸಬಾ ಹೋಬಳಿ ಕೆಂಪನಹಳ್ಳಿ ಗ್ರಾಮದಲ್ಲಿ ಮಚ್ಚು ಹಾಗೂ ರಾಡ್ಗಳನ್ನು ಹಿಡಿದು ಓಡಾಡುತ್ತಿದ್ದರು, ಸಂತೆಗೆ ತೆರುಳುತ್ತಿದ್ದ ರೈತರೊಬ್ಬರು ಇವರನ್ನು ಕಂಡು ಅನುಮಾನಗೊಂಡು ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾರೆ. ಗ್ರಾಮಸ್ಥರು ಮೂವರು ಯುವಕರನ್ನು ಕಂಬಕ್ಕೆ ಕಟ್ಟಿ ಥಳಿಸಿ ಅವರ ಬಳಿ ಇದ್ದ ಮಾರಕಾಸ್ತ್ರಗಳನ್ನು ಪಡೆದು ಪೆÇಲೀಸರಿಗೆ ಒಪ್ಪಿಸಿದ್ದಾರೆ. ಹುಲಿಯೂರು ದುರ್ಗ ಪಿಎಸ್ಐ ಮಂಜು ಯುವಕರನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡಿದ್ದಾರೆ. ಹುಲಿಯೂರು ದುರ್ಗ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.