ನವದೆಹಲಿ, ಜೂ.7- ಸಂಯುಕ್ತ ಜನತಾದಳದ ಮಾಜಿ ಅಧ್ಯಕ್ಷ ಹಾಗೂ ಬಂಡಾಯ ಸಂಸದ ಶರದ್ಯಾದವ್ ಅವರ ವೇತನ ಮತ್ತು ಇತರ ಭತ್ಯೆ ಸೌಲಭ್ಯಗಳಿಗೆ ಸುಪ್ರೀಂಕೋರ್ಟ್ ತಡೆ ನೀಡಿದೆ. ಇದೇ ವೇಳೆ ಅಧಿಕೃತ ನಿವಾಸವನ್ನು ಹೊಂದಲು ಅವರಿಗೆ ಅವಕಾಶ ನೀಡಿದೆ.
ರಾಜ್ಯಸಭೆಯಿಂದ ತಮ್ಮನ್ನು ಅನರ್ಹಗೊಳಿಸಿದ ವಿಷಯ ಕುರಿತು ಶರದ್ಯಾದವ್ ಸಲ್ಲಿಸಿರುವ ಮೇಲ್ಮನವಿ ಸಂಪೂರ್ಣ ಇತ್ಯರ್ಥವಾಗುವ ತನಕ ವೇತನ ಮತ್ತು ಇತರ ಭತ್ಯೆಗಳಿಗೆ ಸುಪ್ರೀಂಕೋರ್ಟ್ ತಡೆ ನೀಡಿದೆ.
ಈ ಸಂಬಂಧ ದೆಹಲಿ ಹೈಕೋರ್ಟ್ ಈ ಹಿಂದೆ ನೀಡಿದ್ದ ಆದೇಶವನ್ನು ಮಾರ್ಪಾಡು ಮಾಡಿದೆ. ನ್ಯಾಯಮೂರ್ತಿಗಳಾದ ಎ.ಕೆ.ಗೋಯಲ್ ಮತ್ತು ಅಶೋಕ್ ಭೂಷಣ್ ಅವರನ್ನೊಳಗೊಂಡ ಪೀಠವು ಅಧಿಕೃತ ಬಂಗಲೆಯನ್ನು ಮಾತ್ರ ಹೊಂದಲು ಅನುಮತಿ ನೀಡಿದೆ.