ಹೆತ್ತಮ್ಮನಿಗೆ ಬೇಡವಾಗಿ ಅನಾಥವಾಗಿ ಪೆÇದೆಯಲ್ಲಿ ಬಿದ್ದು ಅರ್ಚನಾ ಎಂಬ ಮಹಾತಾಯಿಯಿಂದ ಮರುಜೀವ ಪಡೆದಿರುವ ಮರಿ ಕುಮಾರಸ್ವಾಮಿಯನ್ನು ಮತ್ತೆ ಪೆÇೀಷಕರ ಮಡಿಲಿಗೆ ಒಪ್ಪಿಸಲು ಪೆÇಲೀಸರು ಹರಸಾಹಸ

Varta Mitra News

 

ಬೆಂಗಳೂರು, ಜೂ.7- ಹೆತ್ತಮ್ಮನಿಗೆ ಬೇಡವಾಗಿ ಅನಾಥವಾಗಿ ಪೆÇದೆಯಲ್ಲಿ ಬಿದ್ದು ಅರ್ಚನಾ ಎಂಬ ಮಹಾತಾಯಿಯಿಂದ ಮರುಜೀವ ಪಡೆದಿರುವ ಮರಿ ಕುಮಾರಸ್ವಾಮಿಯನ್ನು ಮತ್ತೆ ಪೆÇೀಷಕರ ಮಡಿಲಿಗೆ ಒಪ್ಪಿಸಲು ಪೆÇಲೀಸರು ಹರಸಾಹಸ ನಡೆಸುತ್ತಿದ್ದಾರೆ.
ಅರ್ಚನಾ ಆರೈಕೆ ನಂತರ ವಿಲ್ಸನ್‍ಗಾರ್ಡನ್‍ನಲ್ಲಿರುವ ಶಿಶು ಮಂದಿರದಲ್ಲಿ ಆಶ್ರಯ ಪಡೆದಿರುವ ಅನಾಥ ಮಗು ಇದೀಗ ಲವಲವಿಕೆಯಿಂದಿದೆ.
ಮಗು ಚೇತರಿಸಿಕೊಂಡ ನಂತರ ಆ ಕಂದಮ್ಮನನ್ನು ಪೆÇೀಷಕರ ಮಡಿಲಿಗೆ ಒಪ್ಪಿಸಲು ಎಲೆಕ್ಟ್ರಾನಿಕ್ ಸಿಟಿ ಪೆÇಲೀಸರು ಮುಂದಾಗಿದ್ದಾರೆ.
ಹೀಗಾಗಿ ಮಗು ಪತ್ತೆಯಾದ ಸುತ್ತಮುತ್ತಲ ಪ್ರದೇಶಗಳಲ್ಲಿರುವ ನರ್ಸಿಂಗ್‍ಹೋಂ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಇತ್ತೀಚೆಗೆ ಹೆರಿಗೆಯಾದ ಮಹಿಳೆಯರ ಮಾಹಿತಿ ಮತ್ತು ವಿಳಾಸವನ್ನು ಪೆÇಲೀಸರು ಕಲೆಹಾಕುತ್ತಿದ್ದಾರೆ.

ಆಸ್ಪತ್ರೆಗಳ ಮಾಹಿತಿಯನ್ನಾಧರಿಸಿ ಅನಾಥ ಮಗುವಿನ ಪೆÇೀಷಕರ ಪತ್ತೆಗೆ ಪೆÇಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮಾತ್ರವಲ್ಲ, ಮಗು ಪತ್ತೆಯಾದ ಸುತ್ತಮುತ್ತಲ ಪ್ರದೇಶಗಳಲ್ಲಿ ಅಳವಡಿಸಿರುವ ಸಿಸಿಟಿವಿಯ ದೃಶ್ಯಾವಳಿಗಳನ್ನು ಸಂಗ್ರಹಿಸುತ್ತಿದ್ದಾರೆ.
ಒಟ್ಟಾರೆ, ಶಿಶು ಮಂದಿರದ ಲಾಲನೆ ಪಾಲನೆಯಲ್ಲಿರುವ ಅನಾಥ ಮಗುವಿನ ಪೆÇೀಷಕರನ್ನು ಪತ್ತೆ ಹಚ್ಚಲು ಪೆÇಲೀಸರು ಹರಸಾಹಸ ನಡೆಸುತ್ತಿದ್ದಾರೆ.
ಅನಾಥ ಮಗುವಿಗೆ ಹಾಲುಣಿಸಿ ಮಹಾತಾಯಿಯಾಗಿರುವ ಎಲೆಕ್ಟ್ರಾನಿಕ್ ಸಿಟಿ ಕಾನ್ಸ್‍ಟೆಬಲ್ ಅರ್ಚನಾ ಅವರಿಗೆ ಸಾರ್ವಜನಿಕರಿಂದ ಅಭಿನಂದನೆಗಳ ಮಹಾಪೂರ ಹರಿದುಬಂದಿರುವ ಬೆನ್ನಲ್ಲೇ ಪೆÇಲೀಸ್ ಇಲಾಖೆಯ ಹಲವಾರು ಹಿರಿಯ ಅಧಿಕಾರಿಗಳು ಆಕೆಯ ಮಾತೃ ಹೃದಯದ ವೈಶಾಲ್ಯತೆಯನ್ನು ಕೊಂಡಾಡಿದ್ದಾರೆ.
ನಗರ ಪೆÇಲೀಸ್ ಆಯುಕ್ತ ಸುನಿಲ್‍ಕುಮಾರ್, ಹೆಚ್ಚುವರಿ ಪೆÇಲೀಸ್ ಆಯುಕ್ತರು, ಜಂಟಿ ಪೆÇಲೀಸ್ ಆಯುಕ್ತರು, ಡಿಸಿಪಿಗಳು, ಎಸಿಪಿಗಳು ಸೇರಿದಂತೆ ಹಲವಾರು ಹಿರಿಯ ಅಧಿಕಾರಿಗಳು ಅರ್ಚನಾ ಅವರ ಮಾತೃ ಹೃದಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ