ಟ್ರಕ್ಕೊಂದಕ್ಕೆ ಮಿನಿ-ಬಸ್ ಅಪ್ಪಳಿಸಿ 10 ಮಂದಿ ಪ್ರಯಾಣಿಕರು ಮೃತ

ನಾಸಿಕ್, ಜೂ.7-ನಿಂತಿದ್ದ ಟ್ರಕ್ಕೊಂದಕ್ಕೆ ಮಿನಿ-ಬಸ್ ಅಪ್ಪಳಿಸಿ 10 ಮಂದಿ ಪ್ರಯಾಣಿಕರು ಮೃತಪಟ್ಟು, ಇತರ 12 ಮಂದಿ ತೀವ್ರ ಗಾಯಗೊಂಡ ಘಟನೆ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಇಂದು ಮುಂಜಾನೆ ಸಂಭವಿಸಿದೆ.
ನಾಸಿಕ್‍ನಿಂದ 75 ಕಿಮೀ ದೂರದಲ್ಲಿರುವ ಮುಂಬೈ-ಆಗ್ರಾ ರಾಷ್ಟ್ರೀಯ ಹೆದ್ದಾರಿಯ ಚಾಂದ್ವಾಡ್ ಬಳಿ ಸೋಗ್ರಾಸ್ ಫಾಟದಲ್ಲಿ ಮುಂಜಾನೆ 5.30ರಲ್ಲಿ ಈ ದುರ್ಘಟನೆ ಸಂಭವಿಸಿದೆ ಎಂದು ಪೆÇಲೀಸರು ತಿಳಿಸಿದ್ದಾರೆ.
ಮರುಳು ತುಂಬಿದ್ದ ಟ್ರಕ್ಕೊಂದರ ಟಯರ್ ಪಂಕ್ಚರ್ ಆಗಿ ರಸ್ತೆ ಬದಿ ನಿಂತಿತ್ತು. ಇದೇ ಸಂದರ್ಭದಲ್ಲಿ ವೇಗವಾಗಿ ಬರುತ್ತಿದ್ದ ಮಿನಿ ಬಸ್ ಹಿಂದಿನಿಂದ ಟ್ರಕ್‍ಗೆ ಡಿಕ್ಕಿ ಹೊಡೆಯಿತು. ಈ ಅಪಘಾತದಲ್ಲಿ 10 ಮಂದಿ ಮೃತಪಟ್ಟು, ಇತರ 12 ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಉಪ-ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ