
ಬೆಂಗಳೂರು,ಜೂ.7- ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ಅಂಗ ಸಂಸ್ಥೆಯಾದ ಉತ್ತರ ರಾಜಾಜಿನಗರ ಬ್ರಾಹ್ಮಣ ಸಭೆಯು ವಧು-ವರರ ಸಮಾವೇಶವನ್ನು ಆಯೋಜಿಸಿದೆ.
ಇದೇ ಭಾನುವಾರ ಬೆಳಗ್ಗೆ 10 ಗಂಟೆಗೆ ರಾಜಾಜಿನಗರದ ಬಾಲ ಮೋಹನ್ ವಿದ್ಯಾ ಮಂದಿರದಲ್ಲಿ ವಧುವರರ ಸಮಾವೇಶ ನಡೆಯಲಿದೆ.
ಸಮಾವೇಶದಲ್ಲಿ ಪಾಲ್ಗೊಳ್ಳಲಿಚ್ಚಿಸುವವರು ನಂ.44/1 , 12ನೇ ಅಡ್ಡರಸ್ತೆ, 19ನೇ ಬಿ ಮುಖ್ಯರಸ್ತೆ, 1ನೇ ಕೆ ಬ್ಲಾಕ್, ರಾಜಾಜಿನಗರ ಬಾಲಮೋಹನ್ ವಿದ್ಯಾಮಂದಿರದಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಉತ್ತರ ರಾಜಾಜಿನಗರ ಬ್ರಾಹ್ಮಣ ಸಭಾದ ಕಾರ್ಯದರ್ಶಿ ರಾಜೇಶ್ ಅವರ ದೂರವಾಣಿ ಸಂಖ್ಯೆ 7411011520 ಹಾಗೂ ಸಂಜೀವ್ ಶ್ರೀಹರಿ ಅವರ 9945222248 ಸಂಪರ್ಕಿಸುವಂತೆ ಕೋರಲಾಗಿದೆ.