ಬಾಗ್ದಾದ್‍ನ ಸದರ್ ನಗರ ಜಿಲ್ಲೆಯಲ್ಲಿನ ಶಸ್ತ್ರಾಸ್ತ್ರ ಕೋಠಿ ಸ್ಫೋಟ 18 ಮಂದಿ ಮೃತ!

ಬಾಗ್ದಾದ್, ಜೂ.7-ಇರಾಕ್ ರಾಜಧಾನಿ ಬಾಗ್ದಾದ್‍ನ ಸದರ್ ನಗರ ಜಿಲ್ಲೆಯಲ್ಲಿನ ಶಸ್ತ್ರಾಸ್ತ್ರ ಕೋಠಿ(ಆಮ್ರ್ಸ್ ಡಿಪೆÇೀ) ಸ್ಫೋಟಗೊಂಡು ಕನಿಷ್ಠ 18 ಮಂದಿ ಮೃತಪಟ್ಟು, ಅನೇಕರು ಗಾಯಗೊಂಡಿರುವ ಘಟನೆ ಇಂದು ಮುಂಜಾನೆ ಸಂಭವಿಸಿದೆ. ಈ ಶಸ್ತ್ರಾಸ್ತ್ರ ಸಂಗ್ರಹಾಗಾರದಲ್ಲಿ ರಾಕೆಟ್ ಚಾಲಿತ ಗ್ರೆನೇಡ್‍ಗಳು, ಶೆಲ್‍ಗಳೂ ಸೇರಿದಂತೆ ಭಾರೀ ಶಸ್ತಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಶೇಖರಿಸಿ ಇಡಲಾಗಿತ್ತು. ಇದು ಸೇನಾ ವಿಭಾಗಕ್ಕೆ ಸೇರಿದ ಡಿಪೆÇೀ. ಇಲ್ಲಿ ಹಠಾತ್ ಸ್ಫೋಟ ಸಂಭವಿಸಿ ಸಾವು-ನೋವು ಉಂಟಾಗಿದೆ ಎಂದು ಸೇನಾಧಿಕಾರಿಗಳು ಹೇಳಿದ್ದಾರೆ. ಈ ಸ್ಫೋಟದಲ್ಲಿ 18 ಮಂದಿ ಮೃತಪಟ್ಟು, ಇತರ 32 ಜನರು ಗಾಯಗೊಂಡಿದ್ದಾರೆ. ಇವರಲ್ಲಿ ಕೆಲವರ ಸ್ಥಿತಿ ಶೋಚನೀಯವಾಗಿದೆ ಎಂದು ಅವರು ತಿಳಿಸಿದ್ದಾರೆ. ಸ್ಫೋಟದಿಂದ ಡಿಪೆÇೀ ಛಿದ್ರವಾಗಿದ್ದು, ಅಕ್ಕಪಕ್ಕದ ಕಟ್ಟಡಗಳಿಗೂ ತೀವ್ರ ಹಾನಿಯಾಗಿದೆ. ಈ ಸ್ಫೋಟಕ್ಕೆ ಕಾರಣ ತಿಳಿಯಲು ತನಿಖೆಗೆ ಆದೇಶಿಸಲಾಗಿದೆ ಎಂದು ಬಾಗ್ದಾದ್‍ನ ಸೇನಾ ಕಾರ್ಯಾಚರಣೆಗಳ ವಿಭಾಗದ ಉನ್ನತಾಧಿಕಾರಿಯೊಬ್ಬರು ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ