ಅಮ್ಮ ಐ ಲವ್ ಯು ಚಿತ್ರ ಇದೇ ಜೂ 15 ರಂದು ರಾಜ್ಯಾದ್ಯಂತ 150 ಚಿತ್ರಮಂದಿರಗಳಲ್ಲಿ ಬಿಡುಗಡೆ: ಕೆ.ಎಂ.ಚೈತನ್ಯ

ಹುಬ್ಬಳ್ಳಿ –

ದ್ವಾರಕೀಶ್ ಪ್ರೋಡೆಕ್ಷನ್ಸ್ 51 ನೇ ಚಿತ್ರ ಅಮ್ಮ ಐ ಲವ್ ಯು ಚಿತ್ರ ಇದೇ ಜೂ 15 ರಂದು ರಾಜ್ಯಾದ್ಯಂತ 150 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ದೇಶಕ ಕೆ.ಎಂ.ಚೈತನ್ಯ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೊಂದು ಕಮರ್ಷಿಯಲ್ ಹಾಗೂ ತಾಯಿಯ ಮಹತ್ವವನ್ನು ಸಾರುವ ಚಿತ್ರವಾಗಿದ್ದು, ಚಿತ್ರ ಅತ್ಯುತ್ತಮವಾಗಿ ಮೂಡಿ‌ಬಂದಿದ್ದು, ಕುಟುಂಬ ಸಮೇತರಾಗಿ ಕುಳಿತು ನೋಡುವ ಚಿತ್ರವಾಗಿದ್ದು, ನಾಡಿನ ಜನತೆ ಚಿತ್ರವಬ್ನು ಮೆಚ್ಚಿಕೊಳ್ಳಲಿದ್ದಾರೆ ಎಂದರು. ಬಳಿಕ ಮಾತನಾಡಿದ ನಾಯಕ ನಟ ಚಿರಂಜೀವಿ ಸರ್ಜಾ ಮಾತನಾಡಿ, ಈಗಾಗಲೇ ಈ ಚಿತ್ರದ ಹಾಡುಗಳನ್ನು ಯುಟೂಬ್ ನಲ್ಲಿ ಸಾಕಷ್ಟು ಜನ ಕೇಳಿ ಲೈಕ್ ಮಾಡಿದ್ದಾರೆ.
ಹಿರಿಯ ನಟ ನಿರ್ದೇಶಕ ದ್ವಾರಕೀಶ್ ಪ್ರೊಡೆಕ್ಷನ್ ಸಮಾಜಕ್ಕೆ ತಾಯಿ ಮಹತ್ವದ ಬಗ್ಗೆ ಮತ್ತು ಅಮ್ಮನಗೋಸ್ಕರ ಮಗ ಯಾವ ತ್ಯಾಗ ಮಾಡುತ್ತಾನೆ ಎಂಬ ಮಹತ್ವದ ತಿರುಳು ಹೊಂದಿದ್ದು ಸಮಾಜಕ್ಕೆ ತಾಯಿಯ ಬಗ್ಗೆ ಇರುವ ಸಂಬಂಧವನ್ನು ತೋರಿಸಿಕೊಟ್ಟಿದ್ದಾರೆ.‌ ಈ ಚಿತ್ರ ನನಗೆ ಸಾಕಷ್ಟು ಅನುಭವದ ಪಾಠ ಕಲಿಸಿದೆ ಎಂದರು.ಚಿತ್ರದ ನಾಯಕಿ ನಟಿ ನಿಸ್ವಿಕಾ ಮಾತನಾಡಿ, ಈ ಚಿತ್ರದಲ್ಲಿ ನನಗೆ ದೊಡ್ಡ ಅನುಭವ ನೀಡಿದೆ. ನನಗೆ ಚಿತ್ರವಾಗಿದ್ದು, ನಿರ್ದೇಶಕ ಚೈತನ್ಯ ಹಾಗೂ ಚಿರಂಜೀವಿಯವರು ಒಳ್ಳೆಯ ಮಾರ್ಗದರ್ಶನ ನೀಡಿದ್ದು, ಚಿತ್ರ ಉತ್ತಮವಾಗಿ ಮೂಡಿ ಬಂದಿದೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ