ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಇಂದು ಡರ್ಬಾನ್ ಆಗಮನ:

ಡರ್ಬಾನ್: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಇಂದು ತಮ್ಮ ಐದು ದಿನಗಳ ದಕ್ಷಿಣಾ ಆಪ್ರಿಕಾದ ಪ್ರವಾಸದಲ್ಲಿ ಇಂದು ಡರ್ಬಾನ್‍ಗೆ ಆಗಮಿಸಿದರು. ಬಾನುವಾರ ಸಚಿರು ಜೊಹಾನ್ಸ್‍ಬರ್ಗ್‍ನಲ್ಲಿ ದಕ್ಷಿಣಾ ಆಪ್ರಿಕಾ ಅಧ್ಯಕ್ಷ ಸಿರಿಲ್ ರಾಮ್ಪೋಸ ಅವರನ್ನು ಭೇಟಿಯಾಗಿ 2 ದೇಶಗಳ ಸಂಬಂಧಗಳನ್ನು ಗಟ್ಟಿಗೊಳಿಸುವ ಬಗ್ಗೆ ಮಾತುಕತೆ ನಡೆಸಿದರು.
ಸೋಮವಾರ ಬ್ರಿಕ್ಸ್ ರಾಷ್ಟ್ರಗಳಾದ ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣಾ ಆಪ್ರಿಕಾ ಸಹಭಾಗಿತ್ವದಲ್ಲಿ ಜಾಗತೀಕ ಮಟ್ಟದ ರಾಜಕೀಯ, ಆರ್ಥಿಕ ಪರಿಸ್ಥಿತಿ ಮತ್ತು ಭದ್ರತಾ ಕ್ಷೇತ್ರಗಳಲ್ಲಿ ಮಹತ್ವದ ವಿಷಯಗಳ ಬಗ್ಗೆ ಚರ್ಚಿಸಿದ್ದಾಗಿ ಸಚಿವರು ಹೇಳಿದರು.ದಕ್ಷಿಣಾ ಆಪ್ರಿಕಾದ ರಕ್ಷಣಾ ಸಚಿವ ಲಿಂಡಿವೆ ಸಿಸ್ಲು ಅವರನ್ನು ಸಚಿವೆ ಸುಷ್ಮಾ ಸ್ವರಾಜ್ ಸ್ವಾಗತಿಸಿದರು.
ಇಂದು ದಕ್ಷಿಣಾ ಆಪ್ರಿಕಾದ ರಕ್ಷಣಾ ಸಚಿವರ ಜೊತೆ ಧ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ, ಈ ಅನೌಪಚಾರಿಕ ಶೃಂಗಸಭೆ ಎಲ್ಲಾ ನಾಯಕರಿಗೂ ಒಳ್ಳೆಯ ಆವಕಾಶ, ದ್ವಿಪಕ್ಷೀಯ ಸಮಸ್ಯೆಗಳು ಮ್ತು ಜಾಗತಿಕ ವಿಷಯಗಳ ಬಗ್ಗೆ ಆಳವಾಗಿ ಚರ್ಚಿಸಲು ಇದೊಂದು ಒಳ್ಳೆ ಉತ್ತಮ ಆವಕಾಶ ಎಂದು ಹೇಳಿದರು.
ನಾಳೆ ರಕ್ಷಣಾ ಸಚಿವೆ ಸುಷ್ಮಾ ಸ್ವರಾಜ್ ಐತಿಹಾಸಿಕ ಜಾಗವಾದ, ಮಹಾತ್ಮ ಗಾಂಧಿಯವರ ಆಹಿಂಸಾ ತರ್ಕಶಾಸ್ತ್ರ ಪ್ರಾರಂಭಿಸಿದ ಸ್ಥಳ, ಪಿನೀಕ್ಸ್ ವಸಾಹುತು ಪರಂಪರೆ ಜಾಗಕ್ಕೆ ಭೇಟಿ ನೀಡಲಿದ್ದಾರೆ, ಇದರ ಜೊತೆಗೆ ಪೀಟರ್‍ಮಾರಿಟ್ಜ್‍ಭರ್ಗ್‍ನಲ್ಲಿ ನಡೆಯಲಿರುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಜೂನ್ 6-7 ರಂದು ನಡೆಯುವ ಮಹಾತ್ಮ ಗಾಂಧೀಜಿಯವರ 125ನೇ ಆಹಿಂಸಾ ಚಳುವಳಿ ವಾರ್ಷಿಕೋತ್ಸವದಲ್ಲಿ ಭಾಗವಹಿಸಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ