ಮನುಕುಲ ಉಳಿಯಬೇಕೆಂದರೆ ಪರಿಸರದ ಬಗ್ಗೆ ಜಾಗೃತಿ ಅವಶ್ಯಕ

ದೊಡ್ಡಬಳಾಪುರ : ಮುಂದಿನ ಮನುಕುಲ ಉಳಿಯಬೇಕೆಂದರೆ ಪರಿಸರ ಉಳಿವಿನ ಜಾಗೃತಿ ಅವಶ್ಯಕವಾಗಿದೆ ಎಂದು ದೊಡ್ಡಬಳ್ಳಾಪುರ ನಗರಸಭೆ ಅಧ್ಯಕ್ಷ ತ.ನ.ಪ್ರಭುದೇವ್ ಹೇಳಿದರು
ನಗರಸಭೆವತಿಯಿಂದ ಆಯೋಜಿಸಿದ್ದ ವಿಶ್ವಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹ್ಹಿಸಿ ಮಾತನಾಡಿ ನಿಸರ್ಗ ಮುನಿದರೆ ಜಗತ್ತೆ ಮುಳುಗ್ಗುತ್ತದೆ ಮುಂದಿನ ಪೀಳಿಗೆಗೆ ಪ್ರಕೃತಿ ಉಳಿಯಬೇಕಾದರೆ ಪ್ರತಿಯೊಬ್ಬರು ಒಂದೊಂದು ಸಸಿನೆಡುವ ಮೂಲಕ ಪರಿಸರ ಕಾಪಾಡಬೇಕು ಇಂದಿನ ಜಾಗತಿಕರಣದಿಂದ ಅರಣ್ಯವನ್ನು ನಾಶ ಪಡಿಸಲಾಗುತ್ತಿದೆ ಇದರಿಂದ
ಪರಿಸರ ಹಾಳಾಗುತ್ತಿದೆ ಹಾಗೂ ಪ್ಲಾಸ್ಟಿಕ್ ಬಳಕೆಯನ್ನು ಕಡ್ಡಾಯವಾಗಿ ನಿಷೇದಿಸಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಎಲ್ಲಾ ಪ್ಲಾಸ್ಟಿಕ್‍ಮಯವಾಗುತ್ತದೆ ಎಂದರು ನಗರದ ಬಸ್ ನಿಲ್ದಾಣದ ಬಳಿ ಇರುವ ಪುರಭವನ ಮುಂಭಾಗದಿಂದ ನಗರಸಭೆ ಸದಸ್ಯರು ಮತ್ತು ಸಿಬ್ಬಂದಿ ವರ್ಗ ನಗರಸಭೆ ಕಛೇರಿವರೆಗೆ ಪರಿಸರದ ಜಾಗೃತಿ ಬಗ್ಗೆ ಜಾಥ ನಡೆಸಿ ನಗರಸಭಾ ಆವರಣದಲ್ಲಿ ವಿವಿದ ಜಾತಿಯ ಸಸಿ ನೆಡಲಾಯಿತು ಈ ಸಂದರ್ಭದಲ್ಲಿ ನಗರ ಸಭೆ ಉಪಾಧ್ಯಕ್ಷೆ ಜಯಲಕ್ಷ್ಮೀ ನಟರಾಜು ಸ್ಥಾಯಿ ಸಮಿತಿ ಅಧ್ಯಕ್ಷರಾದ ಹೆಚ್,ಎಸ್,ಶಿವಶಂಕರ್. ಎಲ್ಲಾ ನಗರಸಭೆ ಸದಸ್ಯರು ಸಿಬ್ಬಂದಿ ವರ್ಗದವರು ಆಡಳಿತ ಮಂಡಳಿ ಭಾಗವಹಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ