ಗೌರಿಬಿದನೂರು, ಜೂ.5- ಪತಿಯನ್ನು ಕೊಲೆ ಮಾಡಿ ಪೆÇಲೀಸರ ತನಿಖೆಯ ದಿಕ್ಕು ತಪ್ಪಿಸಿದ್ದ ಪತ್ನಿಯನ್ನು ಗ್ರಾಮಾಂತರ ಠಾಣೆ ಪೆÇಲೀಸರು ಬಂಧಿಸಿದ್ದಾರೆ. ತಾಲ್ಲೂಕಿನ ಕಸಬಾ ಹೋಬಳಿ ಯರ್ರಬಳ್ಳಿ ಗ್ರಾಮದ ಸಂಜೀವಪ್ಪ(35) ಎಂಬುವರನ್ನು ಕೊಲೆ ಮಾಡಿದ್ದ ಪತ್ನಿ ಗಂಗರತ್ನಮ್ಮಳನ್ನು ಪೆÇಲೀಸರು ಬಂಧಿಸಿದ್ದಾರೆ.
ಘಟನೆ ವಿವರ: ಈಗಾಗಲೇ ಮದುವೆಯಾಗಿದ್ದ ಗಂಡನನ್ನು ಬಿಟ್ಟು ಬಂದಿದ್ದ ಮೂಲತಃ ದೊಡ್ಡಬಳ್ಳಾಪುರದ ಗಂಗರತ್ನಮ್ಮ ಎಂಬಾಕೆಯನ್ನು ಸಂಜೀವಪ್ಪ ಕರೆತಂದು ಮದುವೆಯಾಗಿದ್ದು, ಇವರಿಗೆ ಒಂದು ಮಗುವಿದೆ.
ಪತ್ನಿ ಗಂಗರತ್ನಮ್ಮಳ ನಡವಳಿಕೆ ಬಗ್ಗೆ ಪತಿ ಸಂಜೀವಪ್ಪನಿಗೆ ಅನುಮಾನವಿದ್ದು, ಆಗಾಗ್ಗೆ ನಡವಳಿಕೆ ಬದಲಿಸಿಕೊಳ್ಳುವಂತೆ ತಿಳಿ ಹೇಳುತ್ತಿದ್ದು, ಈ ವಿಚಾರವಾಗಿ ದಂಪತಿ ನಡುವೆ ಜಗಳವೂ ನಡೆಯುತ್ತಿತ್ತು ಎನ್ನಲಾಗಿದೆ. ಫೆ.1ರಂದು ಬೆಳಗ್ಗೆ ಕೌಟುಂಬಿಕ ವಿಚಾರವಾಗಿ ದಂಪತಿ ನಡುವೆ ಜಗಳವಾಗಿದೆ. ಅಂದೇ ಮಧ್ಯಾಹ್ನದ ವೇಳೆಗೆ ಸಂಜೀವಪ್ಪ ಮೃತಪಟ್ಟಿದ್ದರು. ಈ ವಿಷಯ ತಿಳಿದ ಮೃತನ ತಂದೆ ಗಂಗಪ್ಪ ಎಂಬುವರು ಮಗನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಜತೆಗೆ ಮೃತನ ಮೂಗಿನಲ್ಲಿ ರಕ್ತ ಬಂದಿದೆ ಎಂದು ಗ್ರಾಮಾಂತರ ಠಾಣೆ ಪೆÇಲೀಸರಿಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೆÇಲೀಸರು, ಮೃತನ ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದರು. ನಂತರ ವರದಿ ಪೆÇಲೀಸರ ಕೈ ಸೇರಿದ್ದು ಅದರಲ್ಲಿ ಮೃತನ ಮರ್ಮಾಂಗ ಮತ್ತು ಕುತ್ತಿಗೆ ಹಿಸುಕಿ ಸಾಯಿಸಲಾಗಿದೆ ಎಂದು ತಿಳಿದು ತನಿಖೆ ಕೈಗೊಂಡರು.
ಎಸ್ಪಿ ಕಾರ್ತಿಕ್ ರೆಡ್ಡಿ ಮಾರ್ಗದರ್ಶನದಲ್ಲಿ ಕಾರ್ಯಪ್ರವೃತ್ತರಾದ ವೃತ್ತನಿರೀಕ್ಷಕ ವೈ.ಅಮರನಾರಾಯಣ್, ಎಎಸ್ಐ ರವಿಕುಮಾರ್ ಅವರು ಗ್ರಾಮಕ್ಕೆ ಮಪ್ತಿಯಲ್ಲಿ ತೆರಳಿ ಗಂಗರತ್ನಮ್ಮಳ ಚಲನವಲನಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಸಂಜೀವಪ್ಪನನ್ನು ಪತ್ನಿಯೇ ಕೊಲೆ ಮಾಡಿರುವ ಬಗ್ಗೆ ಶಂಕೆ ದಟ್ಟವಾದ ಹಿನ್ನೆಲೆಯಲ್ಲಿ ಪೆÇಲೀಸರು ಗಂಗರತ್ನಮ್ಮಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.