ನಾಸಿಕ್, ಜೂ.4-ಮಹಾರಾಷ್ಟ್ರದ ವಿವಿಧ ಜಿಲ್ಲೆಗಳಲ್ಲಿ ವರುಣನ ಆರ್ಭಟ ಮುಂದುವರಿದಿದೆ. ನಾಸಿಕ್ ವಲಯದಲ್ಲಿ ಮಿಂಚು-ಗುಡುಗು ಸಹಿತ ಭಾರೀ ಮಳೆಗೆ ಐವರು ಮೃತಪಟ್ಟು, ಅನೇಕರು ಗಾಯಗೊಂಡಿದ್ದಾರೆ. ಧಾರಾಕಾರ ವರ್ಷಧಾರೆಯಿಂದಾಗಿ ಜಿಲ್ಲೆಯ ವಿವಿದೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ.
ನಾಸಿಕ್ ವಲಯವು ಧುಲೆ, ಜಲಗಾಂವ್, ನಂದುರ್ಬರ್, ಅಹಮದ್ನಗರ್ ಮತ್ತು ನಾಸಿಕ್ ಜಿಲ್ಲೆಗಳನ್ನು ಒಳಗೊಂಡಿದೆ. ಈ ಐದು ಜಿಲ್ಲೆಗಳಲ್ಲಿ ಮುಂಗಾರು ಪೂರ್ವ ವ್ಯಾಪಕ ಮಳೆಯಿಂದ ಸಾವು-ನೋವು ಸಂಭವಿಸಿದೆ.
ಧುಲೆ ಜಿಲ್ಲೆಯ ವರ್ಕೇಡಿ ಗ್ರಾಮದಲ್ಲಿ ನಿನ್ನೆ ಮರವೊಂದು ಉರುಳಿ 32 ವರ್ಷದ ಮಹಿಳೆ ಮತ್ತು ಆಕೆಯ ಮೂವರು ಪುಟ್ಟ ಮಕ್ಕಳು ಅಸುನೀಗಿದರು. ನಾಸಿಕ್ ಜಿಲ್ಲೆಯ ಇಗಟ್ಪೂರಿ ತಾಲ್ಲೂಕಿನ ಅಂದೇವಾಡಿ ಗ್ರಾಮದಲ್ಲಿ ಸಿಡಿಲು ಬಡಿದು 27 ವರ್ಷದ ಯುವಕ ಮೃತಪಟ್ಟಿದ್ದಾನೆ ಇದರೊಂದಿಗೆ ವಾರಾಂತ್ಯದಲ್ಲಿ ಸಂಭವಿಸಿದ ಮಳೆ ಅವಾಂತರಕ್ಕೆ ಈ ವರೆಗೆ 8 ಮಂದಿ ಬಲಿಯಾಗಿದ್ದಾರೆ.