ಶಿವಮೊಗ್ಗ, ಜೂ.4- ತಾಲ್ಲೂಕಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಕಳೆದ 24 ಗಂಟೆಗಳಲ್ಲಿ ಹಲವೆಡೆ ಮನೆಗಳು ಕುಸಿದಿವೆ. ಬೆಳೆಗಳು ಹಾನಿಗೊಂಡಿವೆ ಮತ್ತು ಐವರು ಮೃತಪಟ್ಟಿದ್ದಾರೆ.
ಜೋರು ಮಳೆ ಬರುತ್ತಿದ್ದರೂ ಅದನ್ನು ಲೆಕ್ಕಿಸದೆ ಮೂವರು ಬಾಲಕರು ಇಲ್ಲಿನ ಕಮ್ಮಡಿ ಹಳ್ಳಿ ಗ್ರಾಮದ ಜಂಗ್ಲಿ ಕೆರೆಯಲ್ಲಿ ಈಜುವಾಗ ನೀರಿನ ಮಟ್ಟ ಏರಿದೆ.
ಅದರಿಂದ ಪಾರಾಗಲು ಪ್ರಯತ್ನಿಸಿದರೂ ಸಾಧ್ಯವಾಗದೆ ಬಾಲಕರು ನೀರಿನಲ್ಲಿ ಮೃತಪಟ್ಟಿದ್ದಾರೆ.
ಮೃತರನ್ನು ವಸಂತ್ , ಚಿರಂತೆ ಮತ್ತು ಅಜಯ್ ಎಂದು ತಿಳಿದು ಬಂದಿದೆ.
ಕಮ್ಮಡಹಳ್ಳಿ ಗ್ರಾಮಸ್ಥರು ಎಲ್ಲರೂ ಮದುವೆಗೆ ಹೋಗಿದ್ದಾಗ ಈ ದುರ್ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಪೆÇೀಷಕರು ಮನೆಗೆ ಬಂದು ಮಕ್ಕಳನ್ನು ಹುಡುಕಿದಾಗ ಕಾಣದಿದ್ದಾಗ ಆತಂಕಗೊಂಡು ಕೆರೆಗಳ ಬಳಿ ಹೋಗಿ ನೋಡಿದಾಗ ಅವರ ಶವಗಳು ತೇಲುತ್ತಿದ್ದವು ಎಂದು ಸ್ಥಳೀಯರು ತಿಳಿಸಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉದಯೋನ್ಮುಖ ಕ್ರಿಕೆಟ್ ಪಟು ಸಾವು:ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಮಹಿಷಿಯಲ್ಲಿರುವ ಪ್ರಸಿದ್ಧ ದೇವಾಲಯಕ್ಕೆ ಬಂದಿದ್ದ ಕರ್ನಾಟಕ ರಾಜ್ಯ 19 ವರ್ಷದೊಳಗಿನ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಸಂಧ್ಯಾ (17) ತುಂಗಾ ನದಿಯಲ್ಲಿ ಕೊಚ್ಚಿ ಹೋಗಿದ್ದಾರೆ. ಮಗಳನ್ನು ರಕ್ಷಿಸಲು ಹೋಗಿ ಆಕೆಯ ತಾಯಿ ಚಂದ್ರಕುಮಾರಿ ಕೂಡ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಆದಾಯ ತೆರಿಗೆ ಇಲಾಖೆಯ ಅಧಿಕಾರಿಯ ಕುಟುಂಬ ಸದಸ್ಯರು ದೇವಾಲಯಕ್ಕೆ ಬಂದಿದ್ದರು. ಸ್ನಾನ ಮಾಡಲೆಂದು ನದಿಗೆ ಹೇಳಿದಾಗ ಈ ದುರಂತ ಸಂಭವಿಸಿದೆ.
16 ವರ್ಷದೊಳಗಿನ ತಂಡದಲ್ಲಿ ಇದ್ದಂತಹ ಸಂಧ್ಯಾ ಇತ್ತೀಚೆಗೆ ಬಡ್ತಿ ಪಡೆದು 19 ವರ್ಷದೊಳಗಿನ ತಂಡದಲ್ಲಿ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್ಮೆನ್ ಆಗಿ ಗುರುತಿಸಿಕೊಂಡಿದ್ದರು.
ಭಾರತ ತಂಡವನ್ನು ಸೇರುವ ಸನಿಹದಲ್ಲಿದ್ದ ಈಕೆಗೆ ಹೆಚ್ಚಿನ ತರಬೇತಿಯನ್ನು ನೀಡಲು ನಿರ್ಧರಿಸಲಾಗಿತ್ತು. ಆದರೆ ದುರಂತ ನಮಗೆ ಆಘಾತ ತಂದಿದೆ ಎಂದು ಈಕೆಯ ಕೋಚ್ಗಳಾದ ವಿಷ್ಣು ರೆಡ್ಡಿ , ಲಕ್ಷ್ಮೀ ಹರಿಹರನ್, ನಿಯಾತಿ ಲೂಕೂರ್ ಮತ್ತಿತರರು ಕಂಬನಿ ಮಿಡಿದಿದ್ದಾರೆ.