ಯವತ್ಮಾಲ್: ಪದೇ ಪದೇ ಗಡಿಯಲ್ಲಿ ಪುಂಡಾಟ ನಡೆಸುತ್ತಿರುವ ಪಾಕಿಸ್ತಾನದ ವಿರುದ್ಧ ಭಾರತ ಗುಡುಗಿದ್ದು, ಪಾಕ್ ತನ್ನ ನಡೆಯನ್ನು ತಿದ್ದುಕೊಳ್ಳದೇ ಇದ್ದರೆ ರಂಜಾನ್ ನ್ನೂ ಲೆಕ್ಕಿಸದೇ ಕದನ ವಿರಾಮ ರದ್ದುಗೊಳಿಸುತ್ತೇವೆ ಎಂದು ಹೇಳಿದೆ.
ಈ ಬಗ್ಗೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಹಂಸ್ ರಾಜ್ ಅಹಿರ್ ಮಾತನಾಡಿದ್ದು, ಪಾಕಿಸ್ತಾನ ಗಡಿಯಾಚೆಗಿನ ಭಯೋತ್ಪಾದನೆಯನ್ನು ಮುಂದುವರೆಸಿದರೆ ರಂಜಾನ್ ನ್ನೂ ಲೆಕ್ಕಿಸದೇ ಸೇನಾ ಕಾರ್ಯಾಚರಣೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಮೊದಲು ದಾಳಿ ಮಾಡದೇ ಇರುವ ನಿಯಮಕ್ಕೆ ಭಾರತ ಎಂದಿಗೂ ಬದ್ಧವಾಗಿದೆ. ಆದರೆ ಪಾಕಿಸ್ತಾನ ತನ್ನ ನಡೆಯನ್ನು ತಿದ್ದುಕೊಳ್ಳದಿದ್ದರೆ ರಂಜಾನ್ ನ್ನೂ ಲೆಕ್ಕಿಸದೇ ಸೇನಾ ಕಾರ್ಯಾಚರಣೆ ಮುಂದುವರೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ರಂಜಾನ್ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರದಲ್ಲಿ ಸೇನಾ ಕಾರ್ಯಾಚರಣೆಗೆ ವಿರಾಮ ನೀಡಲಾಗಿದೆ. ಆದರೆ ಸೇನೆ ಮೇಲೆ ದಾಳಿ ನಡೆಸಿದರೆ ಅದಕ್ಕೆ ಪ್ರತ್ಯುತ್ತರ ನೀಡುವ ಅಧಿಕಾರವನ್ನೂ ಸೇನೆಗೆ ನೀಡಲಾಗಿದೆ.