ನಿಪಾ ವೈರಸ್ ಭೀತಿಗೆ ಬಿಬಿಎಂಪಿಯಿಂದ `ವರಹಾ’ ಆಪರೇಷನ್!

ಬೆಂಗಳೂರು: ಕೇರಳದಲ್ಲಿ ಹತ್ತಾರು ಮಂದಿಯನ್ನ ಬಲಿ ಪಡೆದಿರುವ ನಿಪಾ ವೈರಸ್ ಭೀತಿ ಇದೀಗ ಬೆಂಗಳೂರಿನಲ್ಲೂ ಶುರುವಾಗಿದೆ. ಹಂದಿಗಳಿಂದಲೂ ವೈರಸ್ ಹರಡುತ್ತೆ ಎನ್ನುವ ಕಾರಣಕ್ಕೆ ಆಪರೇಷನ್ ವರಹಾ ಕಾರ್ಯಾಚರಣೆಗೆ ಬಿಬಿಎಂಪಿ ಚಾಲನೆ ನೀಡಿದ್ದು, ಸಿಬ್ಬಂದಿ ಹಂದಿ ಹಿಡಿಯೋದ್ರಲ್ಲಿ ಬ್ಯುಸಿಯಾಗಿದ್ದಾರೆ.

ಬೆಂಗಳೂರು ನಗರದಿಂದ 5 ಕಿಲೋ ಮೀಟರ್ ಹೊರಗೆ ಮಾತ್ರ ಹಂದಿ ಸಾಕಾಣಿಕೆಗೆ ಅವಕಾಶವಿದೆ. ಆದರೆ, ನಗರದಲ್ಲೇ ಎಗ್ಗಿಲ್ಲದೆ ಅಕ್ರಮವಾಗಿ ಹಂದಿ ಸಾಕಾಣಿಕೆ ಮಾಡಲಾಗುತ್ತಿದೆ. ಹಂದಿ ಕಾಟಕ್ಕೆ ಬೇಸತ್ತ ನಾಗರಿಕರು ಬಿಬಿಎಂಪಿಗೆ ದೂರು ನೀಡುತ್ತಿದ್ದಾರೆ. ಹಾಗೇ ಹಂದಿಯಿಂದ ನಿಪಾ ವೈರಸ್ ಹರಡುವ ಭೀತಿಯಿಂದ ಬಿಬಿಎಂಪಿ ಹಂದಿ ಹಿಡಿಯುವ ಕಾರ್ಯಾಚರಣೆ ಕೈಗೊಂಡಿದೆ.

ನಗರದ ಪ್ರಮುಖ ಸ್ಥಳಗಳು ಸೇರಿದಂತೆ ಈ ತನಕ 50ಕ್ಕೂ ಹೆಚ್ಚು ಹಂದಿಗಳನ್ನು ಟೆಂಡರ್ ಪಡೆದವರು ಹಿಡಿದು ಸಾಗಿಸಿದ್ದಾರೆ. ಇನ್ನು ಟೆಂಡರ್‍ದಾರರಿಗೆ ಹಣ ನೀಡುವ ಬದಲು ಹಂದಿ ಮಾರಾಟ ಮಾಡಲು ಪಾಲಿಕೆ ಅವಕಾಶ ನೀಡಿದೆ. ಇಂದು ಸಹ ಬಿಬಿಎಂಪಿ ಯಲಹಂಕ, ಬ್ಯಾಟರಾಯನಪುರ, ಮಹಾದೇವ ಪುರ ಭಾಗಗಳಲ್ಲಿ ವರಹ ಕಾರ್ಯಚಾರಣೆ ನಡೆಸಿತ್ತು.

ಆಪರೇಷನ್ ವರಾಹ ಇನ್ನೂ 10 ರಿಂದ 15 ದಿನಗಳ ಕಾಲ ನಡೆಯಲಿದ್ದು, ಇದರಿಂದ ಜನಸಾಮಾನ್ಯರಿಗೆ ಅನುಕೂಲವಾಗುತ್ತೆ ಅಂತ ಬಿಬಿಎಂಪಿ ಹೇಳುತ್ತಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ