ಅಮ್ಲಪಿತ್ತ ವ್ಯಾದಿಗೆ ಹಲವಾರು ಯುವಕರು ವೃದ್ದರು ಪೀಡಿತರಾಗುತ್ತಿದ್ದಾರೆ, ಇದರ ಕಾರಣ ಊಟ ತಿಂಡಿದಲ್ಲಿ ಹೇಚ್ಚು ಕ್ಷಾರ, ತೀಕ್ಷ್ಣವಾಗಿರುವ ಆಹಾರ ಸೇವನೆ, ಅತಿ ಹಚ್ಚು ಬೇಕಿಂಗ್ ಸೋಡ.ಬೇಕಿಂಗ್ ಪೌಡರ್ ಬಳಕೆ,ಹೋಟಲಿನ ಆಹಾರ ಸೇವನೆ, ಇತ್ಯಾದಿ. ಅಮ್ಲಪಿತ್ತದ ಕಾರಣವನ್ನು ಈ ಕೆಳಗಿನ ರೀತಿಯಾಗಿ ವಿಂಗಡಿಸಬಹುದ.
- ವಿರುದ್ದ ಆಹಾರ ಸೇವನೆ -ಉದಾಹರಣೆ: ಮೀನು ಹಾಗು ಹಾಲನ್ನು ಏಕಕಾಲದಲ್ಲಿ ಸೇವಿಸುವುದು, ಹಾಲು ಮತ್ತು ಮೊಸರನ್ನು ಏಕಕಾಲದಲ್ಲಿ ಸೇವನೆ.
- ದುಷ್ಟ ಆಹಾರ ಸೇವನೆ- ಮಲೀನಗೊಂಡಿರುವ ಆಹಾರ ಸೇವನೆ, ತಂಗಳು ಆಹಾರ ಸೇವನೆ.
- ಅತಿಯಾದ ಅಮ್ಲ ಆಹಾರ ಸೇವನೆ- ಅತಿಯಾದ ಉಳಿ ಇರುವ ಆಹಾರ ಸೇವನೆ.
- ವಿದಾಹಿ ಆಹಾರ ಸೇವನೆ- ಅತಿ ತೀಕ್ಷ್ಣವಾದ(ಕಾರವಾದ) ಆಹಾರ ಸೇವನೆ.
- ಪಿತ್ತಪ್ರಕೋಪದ ಆಹಾರ ಸೇವನೆ-ಶರೀರದಲ್ಲಿ ಪಿತ್ತವನ್ನು ಅತಿ ಶೀರ್ಘವಾಗಿ ಹೆಚ್ಚಿಸುವ ಆಹಾರ-ಉದಾಹರಣೆ: ಮಧ್ಯಪಾನ.
- ಸಮಯಕ್ಕೆ ಸೇರಿಯಾಗಿ ಆಹಾರ ಸೇವಿಸದಿದ್ದಲ್ಲಿ- ಹೊಟ್ಟಿ ಹಸಿವನ್ನು ನಿರ್ಲಕ್ಷಿಸಿ ಆಹಾರ ಸೇವನೆ ಮಾಡದಿರುವುದು.
- ಅತಿ ಹೇಚ್ಚು ಕಾಫೀ,ಚಹ ಸೇವನೆ.
- ಅತಿ ಶೀರ್ಘವಾಗಿ ತಿನ್ನುವುದು.
- ಮೂದಲು ತಿಂದ ಆಹಾರ ಜೀರ್ಣವಾಗುವ ಮೂದಲೆಯೆ ಮತೊಮ್ಮೆ ಆಹಾರ ಸೇವಿಸುವುದು.
- ಅತಿ ಬಿಸಿ,ಅತಿ ತಣ್ಣಗಿರುವ ನೀರನ್ನು ಸೇವಿಸುವುದು.
- ಅತಿಕಡಿಮೆ ಪ್ರಮಾಣದಲ್ಲಿ ನೀರನ್ನು ಕುಡಿಯುವುದು.
- ಸೇರಿಯಾದ ಸಮಯದಲ್ಲಿ ನಿದ್ದೆ ಮಾಡದಿರುವುದು.
- ಅತಿ ವತ್ತಡ
- ಮಧ್ಯಾನ್ನ ನಿದ್ದೆ ಮಾಡುವುದು.
- ವ್ಯಾಯಾಮ ಮಾಡದಿರುವುದು
ಈ ಕಾರಣಗಳಿಂದಾಗಿ ಹೊಟ್ಟೆಯಲ್ಲಿ ಉತ್ಪತ್ತಿಯಾಗುವ ಹೈಡ್ರೋಕ್ಲೋರಿಕ್ ಆಸಿಡ್ ಪ್ರಮಾಣ ಸೇರಿಯಾಗಿ ಬಳಕೆಹಾಗದಿದ್ದಲ್ಲಿ ಅಥವ ಹೈಡ್ರೋಕ್ಲೋರಿಕ್ ಆಸಿಡ್ ಉತ್ಪಾದನೆಯು ಅವಶ್ಯಕತೆಗಿಂತ ಹೆಚ್ಚಾದಲ್ಲಿ ಹೊಟ್ಟಯಲ್ಲಿ ಹುಣ್ಣುಗಳ ರೀತಿ ಗಾಯವಾಗಿ ಅಮ್ಲಪಿತ್ತವಾಗುತ್ತದೆ.
ಅಮ್ಲಪಿತ್ತ ಲಕ್ಷಣಗಳು-
ಜೀರ್ಣಶಕ್ತಿ ಕಡಿಮೆಯಾಗುವುದು, ಊಟದ ನಂತರ ಅಥವ ಕಾಲಿ ಹೂಟ್ಟೆಯಲ್ಲಿ ವಾಂತಿಯಾಗುವುದು. ಹುಳಿ ಹಾಗು ಕಾರವಾದ ತೇಗು ಬರುವಿಕೆ,ಹೃದಯ ಹಾಗು ಎದೆಭಾಗದಲ್ಲಿ ನೋವು ಆಗಾಗ ಕಾಣಿಸಿಕೋಳ್ಳುವುದು, ಅತಿಯಾದ ದಾಹ, ಗಂಟಲು ಹಾಗು ಎದೆಯಬಾಗದಲ್ಲಿ ಹಿಡಿತದ ಹಾಗೆ ಭಾಸವಾಗುವುದು, ತಲೆನೋವು, ತಲೆಭಾರ ಸೊಂಟದ ನೋವು.
ಅಮ್ಲಪಿತ್ತದಲ್ಲಿ 2 ವಿದಗಳಿವೆ-
- ಊದ್ರ್ವಗ ಅಮ್ಲಪಿತ್ತ -ಊದ್ರ್ವಗ ಅಮ್ಲಪಿತ್ತದಲ್ಲಿ ಸಹಜವಾಗಿ ಕಾಣುವ ಲಕ್ಷಣವೆಂದರೆ ವಾಂತಿ, ಹಳದಿ ಅಥವ ಬಿಳಿಬಣ್ಣದ ವಾಂತಿ, ಊಳಿ ತೇಗು, ಎದೆ ನೋವು, ಬಾಯಾರಿಕೆ.
- ಅಧೋಗ ಅಮ್ಲಪಿತ್ತ- ಅಧೋಗ ಅಮ್ಲಪಿತ್ತದಲ್ಲಿ ಕಾಣುವ ಸಹಜವಾದ ಲಕ್ಷಣವೆಂದರೆ ತಲೇನೋವು, ಬಾಯಾರಿಕೆ, ತಲೆಸುತ್ತು, ಸುಸ್ತು ಮಂದಾಗ್ನಿ, ನೆಗಡಿ, ಮೈಕೈನೋವು, ಕಪ್ಪು,ಹಸಿರು ಬಣ್ಣ ಮಿಶ್ರೀತವಾದ ಮಲ ವಿರ್ಸಜನೆ.
ಅಮ್ಲಪಿತ್ತದಲ್ಲಿರಬೇಕಾದ ಪತ್ಯ-
ಬಿಚ್ಚಗಿರುವ ಅಥವ ಕಾದಾರಿಸಿರುವ ನೀರಿನ ಸೇವನೆ, ಲಾಜ. ಹಾಲು, ಖಜೂರ, ದ್ರಾಕ್ಷಿ, ಪಪಾಯಹಣ್ಣುಗಳ ಸೇವನೆ.
ಕೆಲಸ ಕಾರ್ಯದಲ್ಲಿ ವತ್ತಡ ಕಡಿಮೇಮಾಡಿಕೋಳ್ಳು ಬೇಕು.
ಅಮ್ಲಪಿತ್ತದ ಅಪತ್ಯ-
ಹೊಟ್ಟೆ ತುಂಬಿದಮೇಲೆಯು ತಿನ್ನುವುದರಲ್ಲಿ ತೊಡಗಿಸಿಕೋಳ್ಳುವುದು,ಅತಿ ಹೇಚ್ಚು ಎಳ್ಳು, ಮೂಸರು, ಮೀನು, ಆಲುಗಡ್ಡೆ,ಐ-ಸ್ಕ್ರೀಮ್ ಸೇವನೆ, ಅತಿ ಮಧ್ಯಪಾನ,ಅತಿ ತೀಕ್ಷ್ಣಹಾಗು ಉಷ್ಣ ಆಹಾರ ಸೇವನೆ, ಬಿಸಿಲಿನಲ್ಲಿ ಹೆಚ್ಚು ಓಡಾಡುವುದು, ಭೋಜನದ ನಂತರ ಜಲಕೀಡೆ ಅಥವ ಸ್ನಾನ ಮಾಡುವುದು, ಅತಿ ಪರಿಶ್ರಮಕಾರಿ ಕೆಲಸವನ್ನು ಊಟಮಾಡಿದ ಕ್ಷಣವೇ ಮಾಡುವುದು, ರಾತ್ರಿ ಹೋತ್ತು ಜಾಗರಣೆ ಇರುವುದು, ಆಹಾರವನ್ನು ಸೇರಿಯಾಗಿ ಅಗಿಯದೆ ತಿನ್ನುವುದು, ಆತುರದಲ್ಲಿ ಭೋಜನವನ್ನು ಮಾಡುವುದು, ತುಂಬ ಚಿಂತಿಸುವುದು, ಭಯ,ಶೋಕದಲ್ಲಿರುವುದು, ಧೂರ್ಮಪಾನ ಮಾಡುವುದು.
ಹೀಗೆ ಅಮ್ಲಪಿತ್ತದ ಪತ್ಯ ಅಪತ್ಯವನ್ನು ಸೇರಿಯಾಗಿ ಅನುಸರಿಸಿದಲ್ಲಿ ಅಮ್ಲಪಿತ್ತ ವ್ಯಾದಿಯನ್ನು ನಿಭಾಯಿಸ ಬಹುದು.
ಲೇಖಕರು
ಡ.ಸಿಂಧು ಪ್ರಶಾಂತ್
974385757