ವಿಧಾನ ಪರಿಷತ್ ಪದವೀಧರ ಕ್ಷೇತ್ರದ ಚುನಾವಣೆ ನ್ಯಾಯ ಸಮ್ಮತವಾಗಿ ನಡೆಸಬೇಕೆಂದು ಅಭ್ಯರ್ಥಿಗಳ ಒತ್ತಾಯ

 

ಬೆಂಗಳೂರು, ಜೂ.2- ವಿಧಾನ ಪರಿಷತ್ ಪದವೀಧರ ಕ್ಷೇತ್ರದ ಚುನಾವಣೆಯನ್ನು ಮುಕ್ತ ಮತ್ತು ನ್ಯಾಯ ಸಮ್ಮತವಾಗಿ ನಡೆಸಬೇಕೆಂದು ಬೆಂಗಳೂರು ಪದವೀಧರ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳು ಒತ್ತಾಯಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸ್ವತಂತ್ರ ಅಭ್ಯರ್ಥಿ ಸಂಪತ್ ರಾಮಾನುಜಮ್ ಮಾತನಾಡಿ, ಚುನಾವಣಾ ಆಯೋಗದ ಕಾರ್ಯ ವೈಖರಿಯಲ್ಲಿ ಗಂಭೀರ ಲೋಪದೋಷಗಳಿವೆ.ಇದರಿಂದ ಚುನಾವಣಾ ಪ್ರಕ್ರಿಯೆಗಳು ಸಹಾ ದುರ್ಬಲಗೊಳ್ಳಲಿವೆ. ಆದ್ದರಿಂದ ನ್ಯಾಯಸಮ್ಮತ ಚುನಾವಣೆಗೆ ಆಯೋಗ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಪದವೀಧರರನ್ನು ನೋಂದಣಿ ಮಾಡುವಾಗ ನೀಡಿದ್ದ ದೂರವಾಣಿ ಸಂಖ್ಯೆಗಳನ್ನು ಚುನಾವಣಾ ಆಯೋಗ ಗೌಪ್ಯವಾಗಿಡಬೇಕಿದೆ. ಆದರೆ ಇಲಾಖೆಯಲ್ಲಿ ಇವುಗಳ ಸೋರಿಕೆಯಾಗಿದೆ, ಬೇರೆ ಅಭ್ಯರ್ಥಿಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.
ಕೆಲ ಖಾಸಗಿ ಸಂಸ್ಥೆಗಳು ಪದವೀಧರ ಕ್ಷೇತ್ರದ 65ಸಾವಿರ 354 ಮತದಾರರ ಮೊಬೈಲ್ ಸಂಖ್ಯೆ ಹಾಗೂ ವಿಳಾಸವನ್ನು ನೀಡಿ ಪ್ರಚಾರ ಜಾಹೀರಾತು ನೀಡುತ್ತಿವೆ, ಇದು ಮತದಾರರ ಸೋರಿಕೆಗೆ ಪ್ರಮುಖ ಸಾಕ್ಷಿಯಾಗಿದೆ ಎಂದು ಹೇಳಿದರು.
ನಾಮಪತ್ರ ಹಿಂಪಡೆಯುವುದು, ಪ್ರಚಾರ ಸಾಮಗ್ರಿಗಳ ಮುದ್ರಣ ಹೆಚ್ಚಿನ ಮತದಾರರಿದ್ದರೂ ಸಹ ಕಡಿಮೆ ಮತದಾರರಿವುದಾಗಿ ತಿಳಿಸುತ್ತಿದೆ. ಹೀಗೆ ಇನ್ನೂ ಹಲವು ದೋಷಗಳನ್ನು ಸರಿಪಡಿಸಿ ನ್ಯಾಯಸಮ್ಮತ ಚುನಾವಣೆ ನಡೆಸಬೇಕೆಂದು ಅವರು ಅಗ್ರಹಿಸಿದರು.
ಸ್ವತಂತ್ರ ಅಭ್ಯರ್ಥಿಗಳಾದ ಡಾ.ಸುಬ್ರಮಣ್ಯಸ್ವಾಮಿ, ಎಮ್.ವರದರಾಜು, ಅಂಜನಮೂರ್ತಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ