ದಾಂಡೇಲಿ : ಸಾರಥಿ-4 ಸಾಫ್ಟವೇರ್ ಮೂಲಕ ನೂತನ ಕಲಿಕಾ ಮತ್ತು ಚಾಲನಾ ಅನುಜ್ಞಾ ಪತ್ರವನ್ನು ಜೂ.5 ರಿಂದ ಆರಭಿಸಲಾಗುತ್ತಿದ್ದು, ಸಾರಥಿ-1 ಮತ್ತು ಸಾರಥಿ-3 ಗೆ ಸಂಬಂಧಿಸಿದ ಕಲಿಕಾ ಮತ್ತು ಮತ್ತು ಚಾಲನಾ ಅನುಜ್ಞಾ ಪತ್ರಕ್ಕೆ ಸಂಬಂಧಿಸಿ ಎಲ್ಲಾ ಅರ್ಜಿಗಳನ್ನು ಜೂ 1 ರಿಂದ ಸ್ಥಗಿತಗೊಳಿಸಲಾಗಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ನಗರದ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಈರಣ್ಣ ರಾಮಣ್ಣ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
ಪ್ರತಿ ಮಂಗಳವಾರ ಜನಸ್ಪಂದನಾ ದಿನ:
ಸಾರ್ವಜನಿಕರು ತಮ್ಮ ವಾಹನ ಮತ್ತು ಲೈಸನ್ಸ್ ಗೆ ಸಂಬಂದಿಸಿದಂತೆ ಅಹವಾಲು, ಕುಂದು ಕೊರತೆಗಳನ್ನು ಅಲಿಸಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಕಛೇರಿಯಲ್ಲಿ ಪ್ರತಿ ಮಂಗಳವಾರ ಮಧ್ಯಾಹ್ನ 3.30ಗಂಟೆಗೆ ಜನಸ್ಪಂದನ ದಿನವನ್ನು ಹಮ್ಮಿಕೊಳ್ಳಲಾಗುವುದು. ಸಾರ್ವಜನಿಕರು ತಮ್ಮ ಅಹವಾಲು ಕುಂದು ಕೊರತೆಗಳನ್ನು ಅಧಿಕಾರಿಗಳಿಗೆ ಲಿಖಿತ ರೂಪದಲ್ಲಿ ಸಲ್ಲಿಸುವ ಮೂಲಕ ಬಗೆಹರಿಸಿಕೊಳ್ಳಬೇಕೆಂದು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಈರಣ್ಣ ರಾಮಣ್ಣವರ ತಿಳಿಸಿದ್ದಾರೆ.