ಶಿರಸಿ :
ಹವಾಮಾನ ಆಧಾರಿತ ಬೆಳೆ ವಿಮೆಯನ್ನು ಕಡ್ಡಾಯ ಗೊಳಿಸಿದ್ದು, ರೈತರು ಅದನ್ನು ತುಂಬಿರುತ್ತಾರೆ. ಮತ್ತೆ 2018-19ನೇ ಸಾಲಿನ ವಿಮೆ ಹಣ ತುಂಬಲು ಸಮಯ ಬಂದಿದ್ದು, ಹಿಂದೆ ತುಂಬಿರುವ ವಿಮೆ ಹಣದ ಮಾಹಿತಿ ಹಾಗೂ 2017-18ನೇ ಸಾಲಿನಲ್ಲಿ ಬೆಳೆ ವಿಮೆ ಎಷ್ಟು ಪ್ರಮಾಣದಲ್ಲಿ ರೈತರಿಗೆ ಸಿಗುತ್ತದೆ ಎಂಬ ಮಾಹಿತಿ ಸಹ ಇರುವುದಿಲ್ಲ. ಇದರ ಬಗ್ಗೆ ಅನೇಕ ರೈತರು ಮಾಹಿತಿ ಒದಗಿಸುವಂತೆ ಆಗ್ರಹಿಸಿದ್ದಾರೆ. ಆ ಪ್ರಕಾರವಾಗಿ ತುಂಬಿರುವ ಬೆಳೆ ವಿಮೆ ವೈಯಕ್ತಿಕವಾಗಿದ್ದು, ಇದರ ಬಗ್ಗೆ ರಶೀದಿ ಹಾಗೂ ರೈತರಿಗೆ ಸರ್ಟಿಫಿಕೇಟ್ ನೀಡುವಂತಾಗಬೇಕು. ಹವಾಮಾನ ಆಧಾರಿತ ಬೆಳೆ ವಿಮೆ ಮಾಡಿರುವ ಏಜೆನ್ಸಿಗಳು ರೈತರ ಸಂಗಡ ಸಂಪರ್ಕವಿರುವುದಿಲ್ಲಾ. ಕಾರಣ ಪ್ರತೀ ವರ್ಷ ಸ್ಥಳೀಯ ಸೊಸೈಟಿ ಮಟ್ಟದಲ್ಲಿ ಸಭೆ ನಡೆಸಬೇಕು. ಪ್ರತೀ ವರ್ಷ ಡಿಸೆಂಬರ್ ಹಾಗೂ ಮೇ ತಿಂಗಳಿನಲ್ಲಿ ಆ ವರ್ಷದಲ್ಲಿ ರೈತರಿಗೆ ಸಿಗುವ ವಿಮೆಯ ಹಣದ ಬಗ್ಗೆ ಕಡ್ಡಾಯ ಮಾಹಿತಿ ಪೂರೈಸಬೇಕು. ಹಾಗೂ ಪ್ರತೀ ವರ್ಷ ರೈತರ ವಿಮಾ ಕಂತು ಎಷ್ಟು ಎಂಬುದನ್ನು ಜಾಹಿರಾತು ಮೂಲಕ ಪ್ರಚಾರಗೊಳಿಸಬೇಕು ಎಂದು ಶಿರಸಿ ಬಿಜೆಪಿ ಗ್ರಾಮೀಣ ಮಂಡಲದ ರಮಾಕಾಂತ ಹೆಗಡೆ ಆಗ್ರಹಿಸಿದ್ದಾರೆ