
ಕೋಲ್ಕತ : ಪುರೂಲಿಯಾದ ಬಲರಾಮ್ಪುರದ ಡಾಭಾ ಗ್ರಾಮದಲ್ಲಿ ಕಂಬವೊಂದರಲ್ಲಿ ಬಿಜೆಪಿ ಕಾರ್ಯಕರ್ತನೊಬ್ಬನ ಶವ ನೇತಾಡುತ್ತಿರುವುದು ಇಂದು ಶನಿವಾರ ಕಂಡು ಬಂದಿರುವುದಾಗಿ ವರದಿಯಾಗಿದೆ.
32ರ ಹರೆಯದ ತನ್ನ ಕಾರ್ಯಕರ್ತ ದುಲಾಲ್ ಕುಮಾರ್ನ ಕೊಲೆಯ ಹಿಂದೆ ಟಿಎಂಸಿಯ ಕೈವಾಡವಿದೆ ಎಂದು ಬಿಜೆಪಿ ಈ ಘಟನೆಗೆ ಪ್ರತಿಕ್ರಿಯೆ ನೀಡಿದೆ. ದುಲಾಲ್ ಕುಮಾರ್ ನಿನ್ನೆ ಶುಕ್ರವಾರದಿಂದ ನಾಪತ್ತೆಯಾಗಿದ್ದರು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ ಅವರು ಟ್ವಿಟರ್ನಲ್ಲಿ “ದುಲಾಲ್ ಕೊಲೆ ಕಳೆದ ಬುಧವಾರ ಕೊಲೆಗೀಡಾಗಿದ್ದ ತ್ರಿಲೋಚನ ಮಹಾತೋ ಕೊಲೆ ರೀತಿಯಲ್ಲೇ ನಡೆದಿದೆ’ ಎಂದು ಹೇಳಿದ್ದಾರೆ.
20 ವರ್ಷಪ್ರಾಯದ ತ್ರಿಲೋಚನ ಮಹಾತೋ ಅವರ ಶವ ಬಲರಾಮಪುರದ ಪುರೂಲಿಯದ ಮರವೊಂದರಲ್ಲಿ ನೇತಾಡುತ್ತಿದ್ದುದು ಕಂಡು ಬಂದಿತ್ತು. ಆತನ ಟಿ-ಶರ್ಟ್ನಲ್ಲಿ ಬಿಜೆಪಿಗೆ ಬೆಂಬಲಿಸುವ ಆರೋಪದ ಬರಹ ಇತ್ತು.