ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಕೊಂಚ ಇಳಿಕೆ

transportation and ownership concept - man pumping gasoline fuel in car at gas station

ನವದೆಹಲಿ:ಜೂ-2: ಕಳೆದ ನಾಲ್ಕು ದಿನಗಳಿಂದ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಕೊಂಚ ಇಳಿಕೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಇಳಿಕೆಯಾದ ಬೆನ್ನಲ್ಲೇ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡಿಸೇಲ್ ದರ 9 ಪೈಸೆಯಷ್ಟು ಕಡಿಮೆಯಾಗಿದೆ.

ದೆಹಲಿಯಲ್ಲಿ ಪೆಟ್ರೋಲ್ ದರ 78.29 ಇದ್ದು ಇದೀಗ 9 ಪೈಸೆಯಷ್ಟು ಕಡಿಮೆಯಾಗಿದ್ದು ಪೆಟ್ರೋಲ್ ದರ 78.20 ರುಪಾಯಿ ಆಗಿದೆ. ಇನ್ನು ಡೀಸೆಲ್ ದರ 69.20 ಇದ್ದು ಇದೀಗ ದರ ಇಳಿಕೆ ಬಳಿಕ 68.11 ರುಪಾಯಿ ಆಗಿದೆ.

ಇನ್ನು ಕೊಲ್ಕತ್ತಾದಲ್ಲಿ ಪೆಟ್ರೋಲ್ ದರ 80.84 ರು. ಮುಂಬೈನಲ್ಲಿ 86.01 ರು. ಹಾಗೂ ಚೆನ್ನೈನಲ್ಲಿ 81.19 ರುಪಾಯಿ ಇದೆ. ಕೊಲ್ಕತ್ತಾದಲ್ಲಿ ಡೀಸೆಲ್ ದರ 71.66 ರು. ಮುಂಬೈನಲ್ಲಿ 73.58 ರು. ಹಾಗೂ ಚೆನ್ನೈನಲ್ಲಿ 72.97 ರುಪಾಯಿ ಇದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ