ಚೆನ್ನೈ : ಕೇಂದ್ರ ಸರಕಾರ ಕೊನೆಗೂ ಕಾವೇರಿ ಜಲ ವ್ಯವಸ್ಥಾಪನ ಪ್ರಾಧಿಕಾರವನ್ನು (ಸಿಎಂಎ) ತಮಿಳು ನಾಡು ಸರಕಾರ ಸ್ವಾಗತಿಸಿದ್ದು ಇದು ಅಮ್ಮ (ಜಯಲಲಿತಾ) ಸರಕಾರಮತ್ತು ರಾಜ್ಯದ ರೈತರ ಅತ್ಯಮೋಘ ವಿಜಯವಾಗಿದೆ ಎಂದು ವರ್ಣಿಸಿದೆ.
ಕಾವೇರಿ ನೀರು ಹಂಚಿಕೆಯಲ್ಲಿ ನ್ಯಾಯಕ್ಕಾಗಿ 1990ರಲ್ಲಿ ಪಕ್ಷದ ಪರಮೋಚ್ಚ ನಾಯಕಿ ಜಯಲಲಿತಾ ಉಪವಾಸ ಸತ್ಯಾಗ್ರಹ ನಡೆಸಿದ್ದರು; ಅಂತೆಯೇ ಎಐಎಡಿಎಂಕೆ ಪಕ್ಷ ಈ ವಿಷಯದಲ್ಲಿ ಹಲವು ಬಗೆಯ ಪ್ರಯತ್ನಗಳನ್ನು ನಡೆಸಿತ್ತು. ಈಗ ಅವೆಲ್ಲದರ ಫಲವಾಗಿ ರಾಜ್ಯದ ಜನರಿಗೆ, ವಿಶೇಷವಾಗಿ ರೈತರಿಗೆ, ಕಾವೇರಿ ನ್ಯಾಯ ಸಿಕ್ಕಿದಂತಾಗಿದೆ ಎಂದು ಮುಖ್ಯಮಂತ್ರಿ ಕೆ ಪಳನಿಸ್ವಾಮಿ ಸಂತಸ ವ್ಯಕ್ತಪಡಿಸಿದರು.
ಎಐಎಡಿಎಂಕೆ ಸರಕಾರದ ನಿರಂತರ ಪ್ರಯತ್ನ ಮತ್ತು ಸತತ ಕಾನೂನು ಹೋರಾಟಗಳ ಫಲವಾಗಿ ಕಾವೇರಿ ಜಲ ನಿರ್ವಹಣ ಪ್ರಾಧಿಕಾರವನ್ನು ಸ್ಥಾಪಿಸಲಾಗಿದೆ ಎಂದು ಪಳನಿಸ್ವಾಮಿ ಹೇಳಿದರು.