
ಬೆಂಗಳೂರು:ಜೂ-1: ಎಂಜಿನಿಯರಿಂಗ್ ಹಾಗೂ ಇತರೆ ವೃತ್ತಿ ಶಿಕ್ಷಣ ಕೋರ್ಸ್‌ಗಳಿಗೆ ಪ್ರವೇಶಾವಕಾಶ ಕಲ್ಪಿಸುವ 2018-19ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶ ಪ್ರಕಟವಾಗಿದ್ದು, ಎಂಜಿನಿಯರಿಂಗ್ ಮತ್ತು ಅಗ್ರಿಕಲ್ಚರ್‌ನಲ್ಲಿ ವಿಜಯಪುರ ಜಿಲ್ಲೆಯ ಎಕ್ಸೆಲೆಂಟ್ ಸೈನ್ಸ್ ಪಿಯು ಕಾಲೇಜು ವಿದ್ಯಾರ್ಥಿ ಶ್ರೀಧರ್ ದೊಡ್ಡಮನಿ ಮೊದಲ ಸ್ಥಾನ ಗಳಿಸಿದ್ದಾರೆ.
ಎಂಜಿನಿಯರಿಂಗ್‌ನಲ್ಲಿ ದಕ್ಷಿಣ ಕನ್ನಡದ ನಾರಾಯಣ ಪೈ ಎರಡನೇ ಸ್ಥಾನ ಪಡೆದಿದ್ದಾರೆ. ಇವರು ಶಾರದಾ ಐಎನ್‌ಡಿಪಿ ಪಿಯು ಕಾಲೇಜು ವಿದ್ಯಾರ್ಥಿ. ಅಗ್ರಿಕಲ್ಚರ್‌ನಲ್ಲಿ ಎರಡನೇ ಸ್ಥಾನವನ್ನು ಹುಬ್ಬಳ್ಳಿಯ ಚೇತನ್ ಐಎನ್‌ಡಿಪಿ ಕಾಲೇಜಿನ ಸಾಯಿ ಕುಮಾರ್ ಆರ್ ಸಾದುನವರ್ ಪಡೆದುಕೊಂಡಿದ್ದಾರೆ.
ವೆಟರ್ನರಿ ವಿಭಾಗದಲ್ಲಿ ಮಂಗಳೂರು ವಳಚ್ಚಿಲ್ ಎಕ್ಸ್‌ಪರ್ಟ್ ಕಾಲೇಜಿನ ವಿನೀತ್ ಮೇಗೂರ್ ಮೊದಲ, ಬಳ್ಳಾರಿ ಸಂಕಲ್ಪ ಪಿಯು ಕಾಲೇಜಿನ ಎಸ್. ಆರ್. ಅಪರೂಪ ಎರಡನೇ ಸ್ಥಾನ ಗಳಿಸಿದ್ದಾರೆ.
ಬಿ.ಫಾರ್ಮಾದಲ್ಲಿ ಬೆಂಗಳೂರು ಕುಂದನಹಳ್ಳಿ ನಾರಾಯಣ ಇ ಟೆಕ್ನೊ ಸ್ಕೂಲ್‌ನ ತುಹಿನ್ ಗುರುನಾಥ್ ಮೊದಲ, ಇಂದಿರಾನಗರ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನ ಅನಿತಾ ಜೇಮ್ಸ್ ಎರಡನೇ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ.