
ಮೈಸೂರು, ಮೇ 30- ಕೊಠಡಿಯೊಂದರಲ್ಲಿ ಜುಜಾಡುತ್ತಿದ್ದ ಹತ್ತು ಮಂದಿಯನ್ನು ನಗರದ ಸಿಸಿಬಿ ಪೆÇಲೀಸರು ಬಂಧಿಸಿ 83ಸಾವಿರ ರೂಗಳನ್ನು ವಶಪಡಿಸಿಕೊಂಡಿದ್ದಾರೆ. ಗೋಕುಲಂನ ಮೂರನೇ ಹಂತದಲ್ಲಿರುವ ದೇವುರೆಸೆಡನ್ಸಿಯ ಕೊಠಡಿಯೊಂದರಲ್ಲಿ ಜುಜಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೆರಿಗೆ ಸಿಸಿಬಿ ಪೆÇಲೀಸರು ದಾಳಿ ನಡೆಸಿದ್ದಾರೆ. ಜುಜಾಟದಲ್ಲಿ ತೊಡಗಿದ್ದ ಹತ್ತು ಮಂದಿಯನ್ನು ಬಂಧಿಸಿ, 83.204ರೂವನ್ನು ವಶಪಡಿಸಿಕೊಂಡಿದ್ದಾರೆ. ಎಸಿಪಿ ಲಿಂಗಪ್ಪ ಅವರ ಮಾರ್ಗದರ್ಶನದಲ್ಲಿ ಇನ್ಸಪೆಕ್ಟರ್ ಶಿವಪ್ರಕಾಶ, ಕೃಷ್ಣಪ್ಪ ಎಎಸ್ಐಗಳಾದ ಸುಭಾಷ್ಚಂದ್ರ, ರಾಜು ಹಾಗೂ ಸಿಬ್ಬಂದಿ ಕಾರ್ಯಚರಣೆಯಲ್ಲಿ ತೊಡಗಿದ್ದರು ಈ ಬಗ್ಗೆ ವಿವಿ ಪುರಂ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.