
ಕೋಲಾರ, ಮೇ 31- ಎಸ್ಬಿಐ ಬ್ಯಾಂಕ್ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ. ನಿನ್ನೆ ಸಂಜೆ ಮಿಂಚು-ಗುಡುಗು ಸಹಿತ ಮಳೆ ಸುರಿದಿದ್ದು, ಈ ವೇಳೆ ಬೂದಿಕೋಟೆಯಲ್ಲಿ ಎಸ್ಬಿಐ ಬ್ಯಾಂಕ್ನ ಛಾವಣಿ ಮೇಲೆ ಅಳವಡಿಸಿದ ಸೋಲಾರ್ ಪ್ಲೇಟ್ಗೆ ಮಿಂಚು ತಗುಲಿ ಬ್ಯಾಂಕ್ನ ಯುಪಿಎಸ್ ಬ್ಯಾಟರಿಗಳು ಬೆಂಕಿಗೆ ಆಹುತಿಯಾಗಿವೆ. ತಕ್ಷಣ ಸಾರ್ವಜನಿಕರು ಅಗ್ನಿಶಾಮಕ ದಳದವರಿಂದ ಬೆಂಕಿ ನಂದಿಸಿದರು. ಈ ಸಂಬಂಧ ಬೂದಿಕೋಟೆಯಲ್ಲಿ ಪ್ರಕರಣ ದಾಖಲಾಗಿದೆ.