ನಾಳೆಯ ನಿರ್ದೇಶಕರು ಎಂಬ ವಿನೂತನ ಕಿರುಚಿತ್ರ ಸ್ಪರ್ಧೆ

 

ಬೆಂಗಳೂರು, ಮೇ 31-ಆಯುಷ್ ಟಿವಿ ವತಿಯಿಂದ ನಾಳೆಯ ನಿರ್ದೇಶಕರು ಎಂಬ ವಿನೂತನ ಕಿರುಚಿತ್ರ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಸ್ಪರ್ಧೆಯ ಜ್ಯೂರಿ ಆನಂದ್ ಬಾಬು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಯೂ ಟ್ಯೂಬ್, ಫೇಸ್‍ಬುಕ್ ಸೇರಿದಂತೆ ಇನ್ನಿತರೆ ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ಪ್ರತಿಭೆಗಳು ಜಾಲ ತಾಣಗಳಲ್ಲಿ ಅನೇಕ ಪ್ರತಿಭೆಗಳು ಆಯ್ದ30 ನಿಮಿಷಗಳವರೆಗೂ ವಿವಿಧ ವಿಷಯ ಆಧರಿಸಿ ಚಿತ್ರ ತೆಗೆದಿದ್ದಾರೆ.

ಇಂತಹ ಪ್ರತಿಭಾವಂತ ನಿರ್ದೇಶಕರಿಗೆ ಅವಕಾಶ ಒದಗಿಸಿ ಕೊಡುವ ಉದ್ದೇಶದಿಂದ ಸ್ಪರ್ಧೆ ಆಯೋಜಿಸಲು ಆಯುಷ್ ಟಿವಿ ಮುಂದಾಗಿದೆ ಎಂದರು.
ಈ ನಿರ್ದೇಶಕರ ಸ್ಪರ್ಧೆಯಲ್ಲಿ ರಾಜ್ಯದ ಜನ ಸಹ ಅಂಕಗಳನ್ನು ನೀಡಲು ಅವಕಾಶ ಕಲ್ಪಿಸಲಾಗಿದೆ. ಯೂಟ್ಯೂಬ್‍ನಲ್ಲಿ ಪ್ರಸಾರವಾಗುವ ಚಿತ್ರಗಳು ಇಷ್ಟವಾದಾಗ ಲೈಕ್ ಬಟನ್ ಒತ್ತುವ ಮೂಲಕ ಚಿತ್ರಕ್ಕೆ ತಮ್ಮ ಅಂಕ ನೀಡಬಹುದಾಗಿದೆ. ಫೇಸ್‍ಬುಕ್‍ನಲ್ಲಿಯೂ ಸಹ ಇಂಥದೇ ಅವಕಾಶವನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನವನ್ನು ನೀಡಲಾಗುವುದು. ಆಯ್ಕೆಯಾಗಿರುವ ಚಿತ್ರಗಳನ್ನು ಜೂನ್ 3ರಿಂದ ಬೆಳಗ್ಗೆ 11 ಗಂಟೆಗೆ ಪ್ರಸಾರ ಮಾಡಲಾಗುವುದು.
ರಾತ್ರಿ 9 ಗಂಟೆಗೆ ಮರು ಪ್ರಸಾರ ಮಾಡಲಾಗುವುದು. ಒಟ್ಟು 14 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಉತ್ತಮ ನಿರ್ದೇಶಕರು, ಉತ್ತಮ ನಾಯಕ ನಟ-ನಟಿ , ಸಂಗೀತ, ನಿದೇಶಕ, ಗಾಯಕ, ಚಿತ್ರನಟ, ಪೆÇೀಷಕ ನಟ, ಛಾಯಾಗ್ರಾಹಕ ನಿರೂಪಣೆಗೆ ಹಾಸ್ಯಚಿತ್ರ ಸಂಕಲನ, ಸಂಭಾಷಣೆಗೆ ಪ್ರಶಸ್ತಿ ನೀಡಲಾಗುವುದು ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ