ಬೆಂಗಳೂರು:ಮೇ-31; ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಕೊನೆಗೂ ಒಮ್ಮತ ವ್ಯಕ್ತವಾಗಿದೆ ಎನ್ನಲಾಗುತ್ತಿದೆ. ಜೆಡಿಎಸ್ ಗೆ ಹಣಕಾಸು ಹಾಗೂ ಕಾಂಗ್ರೆಸ್ ಗೆ ಗೃಹ ಖಾತೆ ದೊರೆಯುವ ಸಾಧ್ಯತೆಗಳಿವೆ.
ಗೃಹ ಖಾತೆಯನ್ನು ಹೊರತು ಪಡಿಸಿ ಕಾಂಗ್ರೆಸ್ ಗೆ ಬೃಹತ್ ಕೈಗಾರಿಕೆ, ಇಂಧನ, ಐಟಿ-ಬಿಟಿ, ಸಾರಿಗೆ ಮತ್ತು ಶಿಕ್ಷಣ ಖಾತೆಗಳನ್ನು ಬಿಟ್ಟುಕೊಡಲು ನಿರ್ಧರಿಸಲಾಗಿದೆ ಎನ್ನಲಾಗಿದೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಸುಮಾರು 5 ಸುತ್ತಿನ ಮಾತುಕತೆ ನಡೆಸಿದ ನಂತರ ಖಾತೆ ಹಂಚಿಕೆ ಸಂಬಂಧ ಸಹಮತಕ್ಕೆ ಬಂದಿದ್ದಾರೆ ಎನ್ನಲಾಗಿದೆ, ರಾಹುಲ್ ಗಾಂಧಿ ವಿದೇಶದಲ್ಲಿದ್ದು ಅವರು ವಾಪಾಸಾದ ನಂತರ ಅಧಿಕೃತವಾಗಿ ಪ್ರಕಟವಾಗಲಿದೆ,
ಇನ್ನೂ ಜೆಡಿಎಸ್ ಗೆ ಕಂದಾಯ ಮತ್ತು ಸಹಕಾರ ವ್ಯವನಹಾರಗಳ ಖಾತೆ ನೀಡುವ ತೀರ್ಮಾನಕ್ಕೆ ಬರಲಾಗಿದೆ, ಕರ್ನಾಟಕ ವಿಧಾನ ಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿ 15 ದಿನ ಕಳೆದಿದ್ದು ಇನ್ನೂ ಸಂಪುಟ ವಿಸ್ತರಣೆ ಹಗ್ಗ ಜಗ್ಗಾಟ ಮುಂದಿದ್ದು, ಶೀಘ್ರದಲ್ಲೆ ತೆರೆಬೀಳಲಿದೆ.