
ಆಗ್ರಾ, ಮೇ 30-ಸೆಪ್ಟಿಕ್ ಟ್ಯಾಂಕ್(ಶೌಚ ಗುಂಡಿ) ಒಂದರಿಂದ ವಿಷಾನಿಲ ಸೋರಿ ಒಂದೇ ಕುಟುಂಬದ ಮೂವರು ಮೃತಪಟ್ಟು, ಇತರ 8 ಮಂದಿ ಅಸ್ವಸ್ಥರಾಗಿರುವ ಘಟನೆ ಉತ್ತರಪ್ರದೇಶದ ಆಗ್ರಾದ ಬರಾನ್ ಪಟ್ಟಣದಲ್ಲಿ ಸಂಭವಿಸಿದೆ.
ತರಕಾರಿ ವ್ಯಾಪಾರಿ ಹೀರಾ ಸಿಂಗ್ ಅವರಿಗೆ ಸೇರಿದ ಸೆಪ್ಟಿಕ್ ಟ್ಯಾಂಕ್‍ನನ್ನು ಸ್ವಚ್ಚಗೊಳಿಸುತ್ತಿದ್ದಾಗ ಚೇಂಬರ್‍ನಿಂದ ವಿಷಾನಿಲ ಸೋರಿಕೆಯಾಗಿ ಒಟ್ಟು 11 ಮಂದಿ ಅಸ್ವಸ್ಥರಾದರು.
ಅವರನ್ನು ತಕ್ಷಣ ನಿನ್ನೆ ರಾತ್ರಿ ಎಸ್.ಎನ್.ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಚಿಕಿತ್ಸೆ ಫಲಕಾರಿಯಾಗದೇ ಹೀರಾ ಸಿಂಗ್ ಹಾಗೂ ಅವರ ಇಬ್ಬರು ಯಶ್‍ಪಾಲ್ ಮತ್ತು ಹೇಮಂತ್ ಮೃತಪಟ್ಟರು ತೀವ್ರ ಅಸ್ವಸ್ಥರಾಗಿರುವ ಇತರ ಎಂಟು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದೆ.