ಪತ್ನಿಯರನ್ನು ತ್ಯಜಿಸುತ್ತಿರುವ ಅನಿವಾಸಿ ಭಾರತೀಯರಿಗೆ ಕೇಂದ್ರ ಸರ್ಕಾರ ಬಿಸಿ ಮುಟ್ಟಿಸಿದೆ

ನವದೆಹಲಿ, ಮೇ 30-ಭಾರತದಲ್ಲಿ ತಮ್ಮ ಪತ್ನಿಯರನ್ನು ತ್ಯಜಿಸುತ್ತಿರುವ ಅನಿವಾಸಿ ಭಾರತೀಯರಿಗೆ ಕೇಂದ್ರ ಸರ್ಕಾರ ಬಿಸಿ ಮುಟ್ಟಿಸಿದೆ. ಮೊದಲ ಬಾರಿಗೆ ಐವರು ಪತ್ನಿ ಪರಿತ್ಯಕ್ತ ಎನ್‍ಆರ್‍ಐಗಳ ಪಾಸ್ ಪೆÇೀರ್ಟ್‍ಗಳನ್ನು ರದ್ದುಗೊಳಿಸಿದೆ.
ವಿದೇಶಗಳಲ್ಲಿ ನೆಲೆಸುವ ಎನ್‍ಆರ್‍ಐಗಳು ಭಾರತದಲ್ಲಿನ ತಮ್ಮ ಮಡದಿಯರನ್ನು ತ್ಯಜಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು. ಅಂಥವರ ವಿರುದ್ಧ ಕಾನೂನುಗಳನ್ನು ಬಿಗಿಗೊಳಿಸಲು ಮುಂದಾಗಿರುವ ಕೇಂದ್ರ ಸರ್ಕಾರ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇಂಥ ಪ್ರಕರಣಗಳ ಸಂಬಂಧ ಐವರು ಅನಿವಾಸಿ ಭಾರತೀಯ ಪಾಸ್‍ಪೆÇೀರ್ಟ್‍ಗಳನ್ನು ಹಿಂದಕ್ಕೆ ಪಡೆದಿರುವ ಪ್ರಕರಣ ಇದೇ ಮೊದಲು.
ಇವರ ವೈವಾಹಿಕ ವಿವಾದ ಪ್ರಕರಣಗಳ ಇತ್ಯರ್ಥ ಸಂಬಂಧ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವಾಲಯದ ಪ್ರಸ್ತಾಪಕ್ಕೆ ವಿದೇಶಾಂಗ ಸಚಿವಾಲಯ ಸಮ್ಮತಿ ನೀಡಿ ಈ ಕ್ರಮ ಕೈಗೊಂಡಿದೆ. ಈ ಸಂಬಂಧ ಇದಕ್ಕೂ ಮುನ್ನ ಪತ್ರಿಕೆಗಳಲ್ಲಿ ನೋಟಿಸ್ ಪ್ರಕಟಿಸಲಾಗಿತ್ತು. ಆದರೆ ಇದೀಗ ವಿದೇಶಾಂಗ ಸಚಿವಾಲಯ ವೆಬ್‍ಸೈಟ್ ಮೂಲಕ ನೇರವಾಗಿ ಸಮನ್ಸ್ ರವಾನಿಸಲು ಸಚಿವಾಲಯ ಮುಂದಾಗಿದೆ.
ಭಾರತೀಯ ಯುವತಿಯರನ್ನು ವಿವಾಹವಾಗಿ ಕೆಲವು ದಿನಗಳಲ್ಲೇ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಪತ್ನಿಯರನ್ನು ತ್ಯಜಿಸುತ್ತಿರುವ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಇವುಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ