ಭುವನೇಶ್ವರ್, ಮೇ 29-ಮಕ್ಕಳ ಕಳ್ಳರ ವದಂತಿ ಒಡಿಶಾ ರಾಜ್ಯಕ್ಕೂ ಹಬ್ಬಿದ್ದು, ವಿವಿಧೆಡೆ ವ್ಯಾಪಕ ಹಿಂಸಾಚಾರ ನಡೆದಿದೆ. ಒಡಿಶಾದ ಕೊರಾಪಟ್‍ನಲ್ಲಿ ಮಕ್ಕಳ ಕಳ್ಳರೆಂಬ ಶಂಕೆಯಿಂದ ಉದ್ರಿಕ್ತ ಗುಂಪೆÇಂದು 15 ಜನರನ್ನು ಮನಸೋ ಇಚ್ಚೆ ಥಳಿಸಿ, ಟಾಟಾ ಸುಮೋ ವಾಹನಕ್ಕೆ ಬೆಂಕಿ ಹಚ್ಚಿದ್ದಾರೆ. ರಾಜ್ಯದ ವಿವಿಧೆಡೆಯೂ ಇಂಥ ಘಟನೆಗಳು ನಡೆದಿರುವುದು ವರದಿಯಾಗಿದೆ. ವದಂತಿಗಳಿಗೆ ಕಿವಿಗೊಡದಂತೆ ಪೆÇಲೀಸರು ಎಚ್ಚರಿಕೆ ನೀಡಿದ್ದರೂ, ಹಿಂಸಾಚಾರ ಮುಂದುವರಿದಿದೆ.