
ದೆಹಲಿ/ಮುಂಬೈ, ಮೇ 29-ಸಾರ್ವಜನಿಕರು ಮತ್ತು ಪ್ರತಿಪಕ್ಷಗಳ ಹಿಡಿಶಾಪದ ನಡುವೆಯೂ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯಲ್ಲಿ ಇಂದು ಮತ್ತೆ ಏರಿಕೆ ಕಂಡುಬಂದಿದೆ.
ಸತತ 13ನೇ ದಿನವೂ ಇಂಧನ ದರ ಹೆಚ್ಚಳ ಸ್ಥಿತಿಯಲ್ಲೇ ಮುಂದುವರಿದಿದ್ದು, ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 86.24 ರೂ.ಗಳಿಗೆ ಏರಿಕೆಯಾಗಿದೆ. ಪ್ರತಿ ಲೀಟರ ಡಿಸೇಲ್ಗೆ 73.79 ರೂ.ಗಳಿಗೆ ಹೆಚ್ಚಳವಾಗಿದೆ.
ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್ಗೆ 78.43 ರೂ.ಗಳಿದ್ದರೆ, ಡಿಸೇಲ್ ಬೆಲೆ 69.31 ರೂ.ಗಳಷ್ಟಿದೆ.
ಇಂಧನ ದರ ಇಳಿಕೆಗೆ ನೀತಿ ಆಯೋಗ ಆಗ್ರಹ : ಇಂಧನ ಬೆಲೆಗಳು ನಿರಂತರವಾಗಿ ಏರಿಕೆಯಾಗಿರುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿರುವ ನೀತಿ ಆಯೋಗ ದರ ಕಡಿಮೆ ಮಾಡಲು ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿದೆ.