
ಲಕ್ನೋ, ಮೇ 29-ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಮಿಂಚು ಮತ್ತು ಗುಡುಗು-ಸಿಡಿಲಿನ ಆರ್ಭಟಕ್ಕೆ ಒಂಭತ್ತು ಮಂದಿ ಮೃತಪಟ್ಟು, ಇತರ ಆರು ಜನ ತೀವ್ರ ಗಾಯಗೊಂಡಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.
ಉನ್ನಾವೋ ಜಿಲ್ಲೆಯ ಕೆಲವು ಭಾಗಗಳಲ್ಲಿ ನಿನ್ನೆ ರಾತ್ರಿ ಮಿಂಚಿನ ಆರ್ಭಟಕ್ಕೆ ಐವರು ಬಲಿಯಾಗಿ, ಇತರ ನಾಲ್ವರು ಗಾಯಗೊಂಡಿದ್ದಾರೆ ಎಂದು ಮಾಹಿತಿ ಇಲಾಖೆ ಮುಖ್ಯ ಕಾರ್ಯದರ್ಶಿ ಅವಿನಿಶ್ ಅವಸ್ಥಿ ತಿಳಿಸಿದ್ದಾರೆ.
ಕಾನ್ಪುರ್ ಮತ್ತು ರಾಯ್ ಬರೇಲಿಯಲ್ಲೂ ಮಿಂಚು ಮತ್ತು ಗುಡುಗು-ಸಿಡಿಲಿನ ದಾಳಿಗೆ ತಲಾ ಇಬ್ಬರು ಅಸುನೀಗಿದ್ದಾರೆ. ಪರಿಹಾರ ಮತ್ತು ರಕ್ಷಣಾ ಕಾರ್ಯಗಳನ್ನು ಕೈಗೊಳ್ಳಬೇಕು ಹಾಗೂ 24 ತಾಸುಗಳಲ್ಲಿ ಪರಿಹಾರ ವಿತರಿಸಬೇಕೆಂದು ಆಯಾ ಜಿಲ್ಲೆಗಳ ಜಿಲ್ಲಾ ದಂಡಾಧಿಕಾರಿಯವರಿಗೆ ತಿಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.