ಜಡಿ ಮಳೆಗೆ ಒಮೆನ್‌ ತತ್ತರ: 13 ಬಲಿ, 8 ಮಂದಿ ನಾಪತ್ತೆ

ಸಲಾಲಾ, ಮೇ 29

ಒಮೆನ್ ದಕ್ಷಿಣ ಭಾಗದಲ್ಲಿ ಸುರಿದಿರುವ ಭಾರೀ ಮಳೆಗೆ ಈ ತನಕ 13 ಮಂದಿ ಬಲಿಯಾಗಿದ್ದು ಇತರ 8 ಮಂದಿ ನಾಪತ್ತೆಯಾಗಿರುವುದಾಗಿ ವರದಿಯಾಗಿದೆ.

ಈ ಭಾರೀ ಜಡಿಮಳೆಗೆ ಕಾರಣವಾಗಿರುವ ಮೆಕು ಚಂಡಮಾರುತದಿಂದಾಗಿ ಇಡಿಯ ಒಮೆನ್‌ ತತ್ತರಗೊಂಡಿದೆ.

ಒಮೆನ್‌ನಲ್ಲಿ ಈ ಋತುವಿನಲ್ಲಿ ಈ ವರೆಗೆ ಸುರಿದಿರುವ ಮಳೆ 278.2 ಮಿ.ಮೀ. ಪ್ರಮಾಣದಲ್ಲಿ ದಾಖಲಾಗಿದೆ. ವಿಶೇಷವೆಂದರೆ ಇದು ಇಲ್ಲಿ  ಸಾಮಾನ್ಯವಾಗಿ ಸುರಿಯುವ ವಾರ್ಷಿಕ ಮಳೆಯ ಮೂರು ಪಟ್ಟು.

ಈ ನಡುವೆ ಇನ್ನೂ ಮೂರು ದಿನಗಳ ಕಾಲ ಜಡಿ ಮಳೆಯಾಗುವ ಸಾಧ್ಯತೆಯನ್ನು ಹವಾಮಾನ ಇಲಾಖೆ ಪ್ರಕಟಿಸಿದೆ. ಈ ಜಡಿ ಮಳೆಯ ಕಾರಣದಿಂದಾಗಿ ಒಮಾನ್‌ನ ಬಹುಮುಖ್ಯ ಪ್ರವಾಸೋದ್ಯಮಕ್ಕೆ ಭಾರೀ ಹೊಡೆದ ಬಿದ್ದಿದೆ.

ಪ್ರಕೃತ ತಾಸಿಗೆ 170 ರಿಂದ 180 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುತ್ತಿದ್ದು ಜನರು ರಸ್ತೆಗೆ ಕಾಲಿಡಲು ಭಯಪಟ್ಟು ಮನೆಯೊಳಗೇ ಉಳಿಯುತ್ತಿದ್ದಾರೆ.ಅಸಂಖ್ಯಾತ ಮರಗಳು ಉರುಳಿ ಬಿದ್ದಿದ್ದು ಅನೇಕ ವಾಹನಗಳು ಹಾನಿಗೀಡಾಗಿವೆ ಎಂದು ವರದಿಗಳು ತಿಳಿಸಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ