
ಬೆಂಗಳೂರು, ಮೇ 29-ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಕಾಂಡಕೋಶಗಳ ದಾನವನ್ನು ಪೆÇ್ರೀ ಹಾಗೂ ರಕ್ತದ ಕ್ಯಾನ್ಸರ್ ಹೊಂದಿರುವ ರೋಗಿಗಳಲ್ಲಿ ಭರವಸೆ ಮೂಡಿಸಲು ಬೆಂಗಳೂರಿನ ಫೆÇೀರ್ಟಿಸ್ ಆಸ್ಪತ್ರೆ ಲೈಫ್ದಾನ್ (ಜೀವದಾನ) ಎಂಬ ಅಭಿಯಾನವನ್ನು ಆರಂಭಿಸಿದೆ.
ಬಿಎಮ್ಟಿಸಿ ಮತ್ತು ಡಿಕೆಎಮ್ಎಸ್ ಗಳ ಯೋಜನೆ ಸ್ಟೆಮ್ ಸೆಲ್ ರಿಜಿಸ್ಟ್ರಿ ಇಂಡಿಯಾದ ಸಹಯೋಗದಲ್ಲಿ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಈ ಬಗ್ಗೆ ಬೆಂಗಳೂರು ಫೆÇೀರ್ಟಿಸ್ ಆಸ್ಪತ್ರೆಯ ಅಸ್ಥಿರಜ್ಜು ಕಸಿ ಮತ್ತು ರಕ್ತರೋಗ ಶಾಸ್ತ್ರ ಸಲಹಾತಜ್ಞರಾದ ಡಾ. ಸಚಿನ್ ಸುರೇಶ್ ಜಾದವ್ ಮಾತನಾಡಿ,`ಅಸ್ಥಿರಜ್ಜು (ಬೋನ್ಮ್ಯಾರೊ) ಕಸಿ ಒಂದು ಶಸ್ತ್ರಚಿಕಿತ್ಸಾಯೇತರ ಕ್ರಮವಾಗಿದ್ದು, ಇದರಲ್ಲಿ ಹಾನಿಗೊಳಗಾಗಿರುವ ಅಥವ ನಶಿಸಿರುವ ಅಸ್ಥಿರಜ್ಜುವಿನ ಬದಲಿಗೆ ಆರೋಗ್ಯಕರ ಅಸ್ಥಿರಜ್ಜು ಕಾಂಡಕೋಶಗಳನ್ನು ಸೇರಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
18 ರಿಂದ 50 ವರ್ಷದವರೆಗಿನ ವಯೋಮಿತಿಯ ಯಾರು ಬೇಕಾದರೂ ರಕ್ತ ಕಾಂಡಕೋಶ ದಾನಿಗಳಾಗಬಹುದು ಕಾಂಡಕೋಶ ದಾನದಂತಹ ಉಪಕ್ರಮ ರಕ್ತಕ್ಯಾನ್ಸರ್ ರೋಗಿಗಳಿಗೆ ನೆರವಾಗುವುದಲ್ಲದೆ ಅವರಿಗೆ ಜೀವನದ 2ನೇ ಅವಕಾಶ ಲಭಿಸುವ ಭರವಸೆ ನೀಡುತ್ತದೆ. ಕಸಿಗಾಗಿ ಶ್ರೇಷ್ಠ ದಾನಿಯನ್ನು ಹುಡುಕುವುದು ಒಂದು ಸಂಕೀರ್ಣ ಪ್ರಕ್ರಿಯೆಯಾಗಿದ್ದು ಕಲವೇ ಕೆಲವು ರಕ್ತ ಕ್ಯಾನ್ಸರ್ ರೋಗಿಗಳು ತಮ್ಮ ಕುಟುಂಬದಲ್ಲಿಯೇ ತಮಗೆ ಹೊಂದುವಂತಹ ದಾನಿಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಇಂತಹ ಸ್ಥಿತಿಯಲ್ಲಿ ಜನರು ಮುಂದೆ ಬಂದು ದಾನ ಮಾಡುವ ಪ್ರತಿಜ್ಞೆ ಕೈಗೊಂಡಲ್ಲಿ ಇದರಿಂದ ನಮಗೆ ರಕ್ತದ ಕ್ಯಾನ್ಸರ್ ವಿರುದ್ಧ ಹೋರಾಡಲು ನೆರವಾಗುತ್ತದೆ ಎಂದರು.
ಬೆಂಗಳೂರಿನ ಫೆÇೀರ್ಟಿಸ್ ಆಸ್ಪತ್ರೆಯ ವಲಯ ನಿರ್ದೇಶಕ ಡಾ.ಮನೀಶ್ ಮಟ್ಟು ಅವರು ಮಾತನಾಡಿ, `ಕಾಂಡಕೋಶ ದಾನಕ್ಕೆ ಪ್ರತಿಜ್ಞೆ ಕೈಗೊಳ್ಳುವುದು ರಕ್ತ ಕ್ಯಾನ್ಸರ್ನಿಂದ ಬಳಲುತ್ತಿರುವ ಮತ್ತು ತಮಗೆ ಹೊಂದಿಕೊಳ್ಳುವಂತಹ ಕಾಂಡಕೋಶದ ದಾನಿಗಾಗಿ ಕಾಯುತ್ತಿರುವ ಜನರ ಜೀವವನ್ನು ಉಳಿಸಲು ಅತ್ಯಂತ ಪರಿಣಾಮಕಾರಿ ಮಾರ್ಗಗಳಲ್ಲಿ ಒಂದಾಗಿದೆ ದೇಶದಲ್ಲಿ ದಾನದ ದರ ಮತ್ತು ಹೊಂದಿಕೆಯಾಗುವ ದಾನಿಗಳು ಅತ್ಯಂತ ಕಡಿಮೆಯಾಗಿರಲು ಜಾಗೃತಿಯ ಕೊರತೆಯೊಂದೇ ಮುಖ್ಯ ಕಾರಣವಾಗಿದೆ ಕಾಂಡಕೋಶ ದಾನದ ಸುರಕ್ಷತೆ ಬಗ್ಗೆ ಜನರಲ್ಲಿ ಜಾಗೃತಿ ಹೆಚ್ಚಿಸಲು ಮತ್ತು ರಕ್ತದ ಕ್ಯಾನ್ಸರ್ ವಿರುದ್ಧ ಹೋರಾಟ ನಡೆಸುವುದಕ್ಕೆ ಲೈಫ್ದಾನ್ ಒಂದು ಉಪಕ್ರಮವಾಗಿದೆ ಎಂದರು.
ಪ್ರತಿ ಆರು ನಿಮಿಷಗಳಿಗೊಮ್ಮೆ ಭಾರತದಲ್ಲಿ ಯಾರಾದರೊಬ್ಬ ವ್ಯಕ್ತಿಗೆ ರಕ್ತದ ಕ್ಯಾನ್ಸರ್ (ಉದಾಹರಣೆಗೆ : ಲುಕೇಮಿಯಾ, ಲಿಂಫೆÇೀಮ ಅಥವ ಮೈಲೋಮ), ಥಲ್ಸೀಮಿಯಾ ಅಥವ ಎಪ್ಲಾಸ್ಟಿಕ್ ಅನೀಮಿಯಾ ಇರುವುದು ಪತ್ತೆಯಾಗುತ್ತಿದೆ ಎಂದು ತಿಳಿಸಿದರು.