
ಬೆಂಗಳೂರು, ಮೇ 29- ರೆಬೆಲ್ ಸ್ಟಾರ್ ಅಂಬರೀಷ್ಗೆ ಈ ಬಾರಿ ಡಬಲ್ ಧಮಾಕದ ಖುಷಿಯಲ್ಲಿದ್ದಾರೆ. ನಿನ್ನೆಯಷ್ಟೇ ತಮ್ಮ ಪುತ್ರ ಅಭಿಷೇಕ್ ಅಭಿನಯದ ಅಮರ್ ಚಿತ್ರದ ಮುಹೂರ್ತ ಸಮಾರಂಭದ ಸಂಭ್ರಮದಲ್ಲಿದ್ದ ಅಂಬಿಗೆ ಇಂದು ಹುಟ್ಟುಹಬ್ಬದ ಸಡಗರ.
ತಮ್ಮ ಮೆಚ್ಚಿನ ತಾರೆಗೆ 66ನೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಲು ಅಭಿಮಾನಿಗಳು ನಿನ್ನೆ ಮಧ್ಯರಾತ್ರಿಯಿಂದಲೇ ಅಂಬಿಯ ಜೆಪಿ ನಗರದ ನಿವಾಸದಲ್ಲಿ ಜಮಾಯಿಸಿದ್ದರು.
ಅಭಿಮಾನಿಗಳೊಂದಿಗೆ ಹುಟ್ಟುಹಬ್ಬದ ಸಂಭ್ರಮವನ್ನು ಆಚರಿಸಿಕೊಂಡ ಅಂಬಿ ಅವರು ತಂದಿದ್ದ ವಿವಿಧ ನಮೂನೆ ಮಾದರಿಯ ಕೇಕ್ಗಳನ್ನು ಕತ್ತರಿಸುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.
ರಾರಾಜಿಸಿದ ಕಟೌಟ್ಗಳು:
ರೆಬೆಲ್ ಸ್ಟಾರ್ ಅಂಬರೀಶ್ಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುವ ಸಲುವಾಗಿ ಜೆಪಿನಗರದ ಮನೆಯ ಸುತ್ತ ಅಂಬಿ ನಟಿಸಿದ್ದ ವಿವಿಧ ಚಿತ್ರಗಳ ಕಟೌಟ್ಗಳು ಕೂಡ ರಾರಾಜಿಸಿದವು.
ಭಟ್ಟರ ವಿಶಿಷ್ಟ ಉಡುಗೊರೆ:
ರೆಬೆಲ್ಸ್ಟಾರ್ ಅಂಬರೀಷ್ ಅವರ 60 ವರ್ಷದ ಸಡಗರದಲ್ಲಿ ವಿಶೇಷ ಗೀತೆಯೊಂದನ್ನು ರಚಿಸಿದ್ದ ಸಾಹಿತಿ, ನಿರ್ದೇಶಕ ಯೋಗರಾಜಭಟ್ ಅವರು ಈ ಹುಟ್ಟುಹಬ್ಬಕ್ಕೂ ಅಂಬಿಯ ಚಿತ್ರ ಜೀವನವನ್ನು ಬಿಂಬಿಸುವ ವಿಶಿಷ್ಟ ಗೀತೆಯೊಂದನ್ನು ಹುಟ್ಟುಹಬ್ಬದ ಉಡುಗೊರೆಯ ರೂಪದಲ್ಲಿ ರಚಿಸಿದ್ದಾರೆ.
ಇದೇ ಸಂದರ್ಭದಲ್ಲಿ ಕಿಚ್ಚ ಸುದೀಪ್ರೊಂದಿಗೆ ನಟಿಸಿರುವ ಅಂಬಿ ನಿಂಗೆ ವಯಾಸ್ತೋ ಚಿತ್ರದ ಮೇಕಿಂಗ್ ವಿಡಿಯೋವನ್ನು ಚಿತ್ರತಂಡ ಬಿಡುಗಡೆ ಮಾಡಿತು.