ಕ್ಯಾಲಿಫೋರ್ನಿಯಾ,ಮೇ 28
ವಾಟ್ಸಪ್ ನಲ್ಲಿ ಇನ್ನು ಮುಂದೆ ಗ್ರೂಪ್ ಕಾಲ್ ಮಾಡಬಹುದು. ಆದರೆ ಎಲ್ಲ ವಾಟ್ಸಪ್ ಬಳಕೆದಾರರಿಗೆ ಈ ವಿಶೇಷತೆ ಲಭ್ಯವಾಗುವುದಿಲ್ಲ.
ಈ ವಿಶೇಷತೆ ಈಗ ಕೆಲ ಐಫೋನ್ ಬಳಕೆದಾರರಿಗೆ ಲಭ್ಯವಾಗಿದ್ದು, ಆಂಡ್ರಾಯ್ಡ್ ಬಳಕೆದಾರರಿಗೆ ಇನ್ನೂ ಸಿಕ್ಕಿಲ್ಲ. ಈಗ ಹೇಗೆ ಕರೆ ಮಾಡಲು ವಿಶೇಷತೆ ಇದೆಯೋ ಅದೇ ರೀತಿಯಾಗಿ ಗ್ರೂಪ್ ಸದಸ್ಯರಿಗೆ ಕರೆ ಮಾಡಬಹುದಾಗಿದೆ. ಇದರಲ್ಲಿ ಎನೆಬಲ್ ಸ್ಪೀಕರ್, ವಿಡಿಯೋ ಕಾಲ್ ಜೊತೆಗೆ ಮ್ಯೂಟ್ ಆಯ್ಕೆ ಗಳು ಸದಸ್ಯರ ಪ್ರೊಫೈಲ್ ನಲ್ಲಿ ಇರಲಿದೆ. ಒಂದೇ ಬಾರಿಗೆ ಎಷ್ಟು ಜನರಿಗೆ ಕರೆ ಮಾಡಬಹುದು ಎನ್ನುವುದು ಇನ್ನು ಸ್ಪಷ್ಟವಾಗಿಲ್ಲ.
ವಾಟ್ಸಪ್ ಆಂಡ್ರಾಯ್ಡ್ ಬಳಕೆದಾರರಿಗೆ ಹೊಸದಾಗಿ ಸೆಲೆಕ್ಟ್ ಆಲ್ ವಿಶೇಷತೆ ಸಿಕ್ಕಿದೆ. ಈ ಆಯ್ಕೆಯನ್ನು ಬಳಕೆ ಮಾಡಿಕೊಂಡು ಬೇಕಾದ ಗ್ರೂಪ್ ಗಳನ್ನು ಮ್ಯೂಟ್ ಮಾಡಬಹುದಾಗಿದೆ. ಇದರ ಜೊತೆಗೆ ಫ್ರೆಂಡ್ಸ್, ಗ್ರೂಪ್ ಗಳನ್ನು ಪಿನ್ ಮಾಡಬಹುದು, ನೋಟಿಫಿಕೇಶನ್ ಗಳನ್ನು ಸುಲಭವಾಗಿ ಮ್ಯೂಟ್ ಮಾಡಬಹುದಾಗಿದೆ.
ಗೂಗಲ್ ಪ್ಲೇ ಸ್ಟೋರಿನಿಂದ ಆಂಡ್ರಾಯ್ಡ್ ಬೀಟಾ ಆವೃತ್ತಿಯ ಅಪ್ಲಿಕೇಶನ್ ಬಳಸುತ್ತಿರುವ ಬಳಕೆದಾರರಿಗೆ ಮಾತ್ರ ಈ ವಿಶೇಷತೆ ಸಿಗಲಿದೆ.