ಭೂಪಾಲ್,ಮೇ 28- ಪತ್ನಿಗೆ ಪತಿಯ ಸಂಬಳ ತಿಳಿದುಕೊಳ್ಳುವ ಸಂಪೂರ್ಣ ಹಕ್ಕಿದೆ ಎಂದು ಮಧ್ಯಪ್ರದೇಶ ಹೈಕೋರ್ಟ್ ಹೇಳಿದೆ.
ಅರ್ಜಿದಾರರಾದ ಸುನಿತಾ ಅವರ ಪತಿ ಬಿಎಸ್‍ಎನ್‍ಎಲ್‍ನಲ್ಲಿ ಉನ್ನತ ಹುದ್ದೆಯಲ್ಲಿದ್ದು, ಪ್ರತಿ ತಿಂಗಳು ಕುಟುಂಬ ನಿರ್ವಹಣೆಗಾಗಿ 7 ಸಾವಿರ ರೂ. ನೀಡುತ್ತಿದ್ದು, ಹೆಚ್ಚಿನ ಪರಿಹಾರಕ್ಕಾಗಿ ಹಾಗೂ ಪತಿಯ ಸ್ಯಾಲರಿ ಸ್ಲಿಪ್ ನೀಡುವಂತೆ ಸುನಿತಾ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಆದರೆ ಸ್ಥಳೀಯ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿತ್ತು. ಕೋರ್ಟ್ ತೀರ್ಪು ಪ್ರಶ್ನಿಸಿ 2007ರಲ್ಲಿ ಸುನಿತಾ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಸಿಐಸಿ, ಪತಿ ಪ್ಲೇ ಸ್ಲಿಪ್ ಪಡೆಯುವ ಅಧಿಕಾರ ಪತ್ನಿಗಿದೆ ಎಂದಿತ್ತು. ಈ ತೀರ್ಪು ಪ್ರಶ್ನಿಸಿ ಪತಿ ಹೈಕೋರ್ಟ್‍ಗೆ ಮನವಿ ಸಲ್ಲಿಸಿದ್ದರು.
ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್ ಪತ್ನಿ ಮೂರನೇಯವಳಲ್ಲ. ಹಾಗಾಗಿ ಪತ್ನಿಗೆ ಪತಿಯ ಸಂಬಳ ತಿಳಿದುಕೊಳ್ಳುವ ಸಂಪೂರ್ಣ ಹಕ್ಕಿದೆ ಎಂದು ಆದೇಶ ನೀಡಿದೆ.