ಬ್ಯಾರೇಜ್ ಸಿದ್ದು  ಎಂದೇ ಹೆಸರಾಗಿದ್ದ ಸಿದ್ದು ನ್ಯಾಮಗೌಡ

ಬೆಂಗಳೂರು,ಮೇ 28

ಎಂಜನಿಯರ್ ಆಗಿದ್ದ ಸಿದ್ದು ನ್ಯಾಮಗೌಡ ಬ್ಯಾರೇಜ್ ಸಿದ್ದು  ಎಂದೇ ಹೆಸರಾಗಿದ್ದರು. ರೈತರ ಮೂಲಕ ತಾವು ಹಣ ಸೇರಿಸಿ ಬ್ಯಾರೇಜ್ ನಿರ್ಮಿಸಿದ್ದ ಖ್ಯಾತಿ ಇವರಿಗೆ ಸಲ್ಲುತ್ತದೆ.

ಬ್ಯಾರೇಜ್ ಗಳ ನಿರ್ಮಾಣದಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿ ಸಾಧನೆ ಮಾಡಿದ್ದಕ್ಕೆ ಬ್ಯಾರೇಜ್ ನ್ಯಾಮಗೌಡ ಅಂತ ಜನ ಗುರುತಿಸುತ್ತಿದ್ದರು. ಸ್ಥಳೀಯರ ಕುಡಿಯುವ ನೀರಿನ ಬವಣೆ ನೀಗಿಸಲಾಗಿದೆ. ಈ ಬ್ಯಾರೇಜ್ ಗೆ ಶ್ರಮಬಿಂದುಸಾಗರ ಎಂದೂ ನಾಮಕರಣ ಮಾಡಲಾಗಿದೆ.

ರಾಮಕೃಷ್ಣ ಹೆಗಡೆಯವರನ್ನು ಬಾಗಲಕೋಟೆಯಲ್ಲಿ ಸೋಲಿಸಿದ ಮೇಲೆ ರಾಜ್ಯಾದ್ಯಂತ ಪ್ರಸಿದ್ದರಾದರು. ಈ ಬಾರಿಯ ಚುನಾವಣೆ ಸಹ ಸಿದ್ದು ಗೌಡರಿಗೆ ಸವಾಲಾಗಿತ್ತು. ಮುರುಗೇಶ್ ನಿರಾಣಿ ಸಹೋದರ ಸ್ಪರ್ಧಿಸಿದ ಕಾರಣ, ಕೊನೆ ಘಳಿಗೆಯಲ್ಲಿ ಗೆಲುವು ಇವರನ್ನ ಹಿಂಬಾಲಿಸಿತು.

ಸರ್ಕಾರ ರಚನೆಯಾಗಿ ಇನ್ನೇನು ಸಚಿವರಾಗುತ್ತಾರೆ ಅನ್ನುವದೊರಳೊಗೆ ವಿಧಿ ಇವರ ಬಾಳಲ್ಲಿ ಆಡಿದ್ದೆ ಬೇರೆ. ಸಣ್ಣ ನೀರಾವರಿ ಇಲಾಖೆಯ ಸಚಿವರಾಗಬಹುದು ಎಂದು ನೀರಿಕ್ಷಿಸಿದ್ದವರು ಇಂದು ಮರಳಿ ಬಾರದ ಲೋಕಕ್ಕೆ ಹೋಗಿದ್ದಾರೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ. ನಿಮ್ಮ ಕುಟುಂಬಕ್ಕೆ ದುಖಃವನ್ನು ತಡೆದುಕೊಳ್ಳುವ ಶಕ್ತಿ ಸಿಗಲಿ.

ಜಮಖಂಡಿ ತಾಲ್ಲೂಕಿನ ಚಿಕ್ಕಪಡಸಲಗಿ 2018ರ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಬಾಗಲಕೋಟೆ ಜಿಲೆಯಲ್ಲಿ ಸ್ಥಳೀಯವಾಗಿ ಆಯ್ಕೆಯಾದ ಏಕೈಕ ಕಾಂಗ್ರೆಸ್ ಶಾಸಕ ಸಿದ್ದು ನ್ಯಾಮಗೌಡ. ಬಿಜೆಪಿ ಅಭ್ಯರ್ಥಿ ಶ್ರೀಕಾಂತ ಕುಲಕರ್ಣಿ ವಿರುದ್ದ 2795 ಮತಗಳ ಅಂತರದಿಂದ ಜಯ ಸಾಧಿಸಿದ್ದರು.

ಗಾಣಿಗ ಸಮುದಾಯದ ಪ್ರಮುಖ ಮುಖಂಡರಾಗಿದ್ದ ಸಿದ್ದು ನ್ಯಾಮಗೌಡರು, ಪ್ರಬಲ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು.

ಕಳೆದ ಬಾರಿ ಸಚಿವ ಸ್ಥಾನದಿಂದ ವಂಚಿತರಾಗಿದ್ದರು. ಈ ಬಾರಿ ಸಚಿವ ಸ್ಥಾನಕ್ಕಾಗಿ ಪೈಪೋಟಿ ನಡೆಸಿದ್ದರು. ಮಾತ್ರವಲ್ಲದೇ ಕಾಂಗ್ರೆಸ್ ಹೈಕಮಾಂಡ್  ಜತೆ ಉತ್ತ‌ಮ ಬಾಂಧವ್ಯ ಕಾಯ್ದುಕೊಂಡಿದ್ದರು.

 

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ