ನ್ಯೂಯಾರ್ಕ್, ಮೇ 28-ಭಾರತದ ಸ್ಟಾರ್ಟಪ್ (ನವೋದ್ಯಮ) ಕಂಪೆನಿಗಳು ಮುಂದಿನ ದಶಕಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಲಿದೆ ಎಂದು ನಾಸ್ಕೋಮ್ ಅಧ್ಯಕ್ಷ ರಿಶದ್ ಪ್ರೇಮ್ಜಿ ಹೇಳಿದ್ದಾರೆ.
ವಿಶಾಲ ತಂತ್ರಜ್ಞಾನ ತಳಹದಿಯ ಮೇಲೆ ಭಾರತೀಯ ನವೋದ್ಯಮಗಳು ವಿಶ್ವದರ್ಜೆ ಸಂಸ್ಥೆಗಳಾಗುವ ಸಾಮಥ್ರ್ಯ ಹೊಂದಿವೆ. ಇವು ಮುಂದಿನ ಹಂತದಲ್ಲಿ ಬ್ರಾಂಡ್ ಇಂಡಿಯಾ ನಿರ್ಮಾಣದಲ್ಲೂ ಮಹತ್ವದ ಪಾತ್ರ ನಿರ್ವಹಿಸಲಿವೆ ಎಂದು ಮಾಹಿತಿ ತಂತ್ರಜ್ಞಾನ ಸಂಸ್ಥೆ ವಿಪೆÇ್ರೀ ಮುಖ್ಯ ಕಾರ್ಯತಂತ್ರ ಅಧಿಕಾರಿಯೂ ಆಗಿರುವ ಪ್ರೇಮ್ಜಿ ತಿಳಿಸಿದರು. ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನವೊಂದರಲ್ಲಿ ಭಾರತದ ಹೊಸ ಕಂಪೆನಿಗಳ ಸಾಮಥ್ರ್ಯ -ಸಾಧನೆಗಳ ಬಗ್ಗೆ ವಿವರಿಸಿದ ಅವರು, ಈ ನವೋದ್ಯಮಗಳು ಮುಂದಿನ ವರ್ಷಗಳಲ್ಲಿ ನಿರೀಕ್ಷೆಗೂ ಮೀರಿ ಪ್ರಗತಿ ಸಾಧಿಸಲಿವೆ ಎಂದು ವಿಶ್ಲೇಷಿಸಿದರು.