ಪ್ಯಾರಿಸ್, ಮೇ 28-ಅಪಾರ್ಟ್ಮೆಂಟ್ ಒಂದರ ನಾಲ್ಕನೇ ಮಹಡಿಯ ಬಾಲ್ಕನಿಯಿಂದ ಆಕಸ್ಮಿಕವಾಗಿ ಜಾರಿ ಮಹಡಿ ತುದಿಯಲ್ಲಿ ಅಪಾಯಕಾರಿಯಾಗಿ ನೇತಾಡುತ್ತಿದ್ದ ನಾಲ್ಕು ವರ್ಷದ ಮಗುವನ್ನು ಯುವಕನೊಬ್ಬ ಸ್ಪೈಡರ್ಮ್ಯಾನ್ನಂತೆ ರಕ್ಷಿಸಿದ್ದಾರೆ.
ತನ್ನ ಪ್ರಾಣ ಲೆಕ್ಕಿಸದೇ ಮಗು ರಕ್ಷಿಸಿದ ಮಮೌಡೌ ಗಸ್ಸಮ್ ಎಂಬ ಯುವಕನ ಸಾಹಸ ಮತ್ತು ಸಮಯ ಪ್ರಜ್ಞೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಲP್ಷÁಂತರ ಜನ ಇದನ್ನು ವೀಕ್ಷಿಸಿ ಪ್ರಶಂಸಿಸಿದ್ದಾರೆ.
ಮಗು ಅಪಾಯದಲ್ಲಿರುವುದನ್ನು ಹಾಗೂ ಯಾವುದೇ ಕ್ಷಣದಲ್ಲಿ ಕೆಳಗೆ ಬೀಳುವ ಸಾಧ್ಯತೆಯನ್ನು ಅರಿತ ಈ ಯುವಕ ಕೆಲವೇ ಸೆಕೆಂಡುಗಳಲ್ಲಿ ನಾಲ್ಕನೆ ಮಹಡಿಯನ್ನು ಸ್ಪೈಡರ್ ಮ್ಯಾನ್ನಂತೆ ಏರಿ ಮಗುವನ್ನು ರಕ್ಷಿಸಿದ. ಈ ಸಾಹಸದಿಂದ ಯುವಕನಿಗೆ ಪ್ಯಾರಿಸ್ ಸ್ಪೈಡರ್ಮ್ಯಾನ್ ಎಂದೇ ನಾಮಕರಣ ಮಾಡಲಾಗಿದೆ.