ಇಸ್ಲಾಮಾಬಾದ್, ಮೇ 27-ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗಿರುವ ಪಾಕಿಸ್ತಾನದಲ್ಲಿ ಜುಲೈ 25ರಂದು ಸಾರ್ವತಿಕ ಚುನಾವಣೆಗೆ ವೇದಿಕೆ ಸಜ್ಜಾಗಿದೆ.
ಜುಲೈ 25 ಮತ್ತು 27ರ ನಡುವೆ ರಾಷ್ಟ್ರೀಯ ಚುನಾವಣೆ ಮತ್ತು ನಾಲ್ಕು ಪ್ರಾಂತೀಯ ಶಾಸನಸಭೆಗಳಿಗೆ ಚುನಾವಣೆಗೆ ನಡೆಸುವ ಪ್ರಸ್ತಾವನೆ ಕುರಿತು ಮೇ 21ರಂದು ಪಾಕ್ ಅಧ್ಯಕ್ಷರಿಗೆ ಪಾಕಿಸ್ತಾನ ಚುನಾವಣಾ ಆಯೋಗ(ಇಸಿಪಿ) ಪತ್ರ ಬರೆದಿತ್ತು. ನಿನ್ನೆ ಅಧ್ಯಕ್ಷ ಮಮ್ನೂನ್ ಹುಸೇನ್ ನಿನ್ನೆ ಜುಲೈ 25ರಂದು ಚುನಾವಣೆಗೆ ಅನುಮೋದನೆ ನೀಡಿದರು ಎಂದು ಅಧ್ಯಕ್ಷರ ಕಾರ್ಯಾಲಯ ತಿಳಿಸಿದೆ.
ಮಧ್ಯಂತರ ಪ್ರಧಾನಿ ಆಯ್ಕೆ ಕುರಿತು ಆಡಳಿತರೂಢ ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಬಣ ಹಾಗೂ ವಿರೋಧ ಪಕ್ಷಗಳ ನಡುವೆ ಬಿಕ್ಕಟ್ಟು ಮುಂದುವರಿದಿರುವಾಗಲೇ ಸಾರ್ವತ್ರಿಕ ಮತ್ತು ಪ್ರಾಂತೀಯ ಶಾಸನಸಭೆ ಚುನಾವಣೆಗೆ ಅಖಾಡ ಸಜ್ಜಾಗಿದೆ.
ರಾಷ್ಟ್ರೀಯ ಚುನಾವಣೆ ಆಡಳಿತರೂಢ ಪಕ್ಷಕ್ಕೆ ಅಗ್ನಿ ಪರೀಕ್ಷೆಯಾಗಿದ್ದು, ಮಾಜಿ ಕ್ರಿಕೆಟ್ಟಿಗ ಹಾಗೂ ರಾಜಕಾರಣಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರಿಕ್-ಎ-ಇನ್ಸಾಫ್ ಪಕ್ಷ ಪ್ರಮುಖ ಸವಾಲೊಡ್ಡಲಿದೆ.