ಅಪಘಾತಕ್ಕೀಡಾಗಿ ಕೇಂದ್ರೀಯ ಮೀಸಲು ಪೆÇಲೀಸ್ ಪಡೆ (ಸಿಆರ್‍ಪಿಎಫ್)ಯ 19 ಸಿಬ್ಬಂದಿ ಗಾಯ

ಶ್ರೀನಗರ, ಮೇ 27-ವಾಹನವೊಂದು ಅಪಘಾತಕ್ಕೀಡಾಗಿ ಕೇಂದ್ರೀಯ ಮೀಸಲು ಪೆÇಲೀಸ್ ಪಡೆ (ಸಿಆರ್‍ಪಿಎಫ್)ಯ 19 ಸಿಬ್ಬಂದಿ ಗಾಯಗೊಂಡಿರುವ ಘಟನೆ ಇಂದು ಮುಂಜಾನೆ ಕಾಶ್ಮೀರ ರಾಜಧಾನಿ ಶ್ರೀನಗರದಲ್ಲಿ ಸಂಭವಿಸಿದೆ.
ಶ್ರೀನಗರ ಬೆಮಿನಾ ಕೇಂದ್ರ ಕಚೇರಿ ಬಳಿ ಯೋಧರು ತೆರಳುತ್ತಿದ್ದ ಸೇನಾ ವಾಹನ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿತು. ಈ ಘಟನೆಯಲ್ಲಿ 19 ಸಿಆರ್‍ಪಿಎಫ್ ಯೋಧರು ಗಾಯಗೊಂಡರು ಎಂದು ಪೆÇಲೀಸ್ ಅಧಿಕಾರಿಯೊಬ್ಬರು ಹೇಳಿದ್ಧಾರೆ.
ತಲಾ 21 ಸಿಬ್ಬಂದಿಯಿದ್ದ ಮೂರು ವಾಹನಗಳು ತೆರಳುತ್ತಿದ್ದಾಗ ಒಂದು ವಾಹನ ಮುಂಜಾನೆ 5 ಗಂಟೆಯಲ್ಲಿ ಅಪಘಾತಕ್ಕೀಡಾಯಿತು. ಗಾಯಗೊಂಡ ಯೋಧರನ್ನು ಜೆವಿಸಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಅವರು ತಿಳಿಸಿದ್ದ್ಧಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ