
ಪಣಜಿ, ಮೇ 26-ಮೂವರು ದುಷ್ಕಮಿಗಳು ಇಬ್ಬರು ಪ್ರೇಮಿಗಳನ್ನು ಅಡ್ಡಗಟ್ಟಿ ನಗ್ನಗೊಳಿಸಿ, ಮೊಬೈಲ್ ಫೆÇೀನ್‍ಗಳಲ್ಲಿ ಆ ದೃಶ್ಯಗಳನ್ನು ಸೆರೆ ಹಿಡಿದು ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಹಣ ಮತ್ತು ಚಿನ್ನಾಭರಣ ದೋಚಿ ಪರಾರಿಯಾಗಿರುವ ಹೇಯ ಘಟನೆ ಕರಾವಳಿ ರಾಜ್ಯ ಗೋವಾದಲ್ಲಿ ನಡೆದಿದೆ.
ಸೆರ್ನಾಭಾಟಿಂ ಬೀಚ್‍ನಲ್ಲಿ ಗುರುವಾರ ರಾತ್ರಿ ಈ ಘಟನೆ ನಡೆದಿರುವುದಾಗಿ ವರದಿಯಾಗಿದೆ.
ಮೂವರು ಈ ಇಬ್ಬರನ್ನು ಅಡ್ಡಗಟ್ಟಿದರು. ನಂತರ ಬಲವಂತವಾಗಿ ಅವರನ್ನು ನಗ್ನಗೊಳಿಸಿ, ದೃಶ್ಯಗಳನ್ನು ಸೆರೆಹಿಡಿದರು. ಬಳಿಕ ಗೆಳೆಯನ ಮುಂದೆಯೇ 20 ವರ್ಷದ ಯುವತಿ ಮೇಲೆ ಗ್ಯಾಂಗ್ ರೇಪ್ ನಡೆಸಿ ನಂತರ ಹಣ-ಆಭರಣ ಸುಲಿಗೆ ಮಾಡಿ ಪರಾರಿಯಾದರು. ಈ ಸಂಬಂಧ ಪೆÇಲೀಸರಿಗೆ ದೂರು ನೀಡಲಾಗಿದೆ.
ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿಯನ್ನು ನಿರೀಕ್ಷಿಸಲಾಗುತ್ತಿದೆ ಎಂದು ದಕ್ಷಿಣ ಗೋವಾ ಪೆÇಲೀಸ್ ವರಿಷ್ಠಾಧಿಕಾರಿ ಅರವಿಂದ್ ಗವಾಸ್ ತಿಳಿಸಿದ್ದಾರೆ.
ಯುವಕ ಮತ್ತು ಯುವತಿ ನೀಡಿರುವ ದುಷ್ಕರ್ಮಿಗಳ ಚಹರೆಯನ್ನು ಆಧರಿಸಿ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಅವರು ಹೇಳಿದ್ದಾರೆ.