
ಬಿಹಾರ್ ಷಹರ್, ಮೇ 26-ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಭಾರತೀಯ ವಾಯು ಪಡೆ (ಐಎಎಫ್) ಯೋಧನೊಬ್ಬನನ್ನು ಗುಂಪೆÇಂದು ಗುಂಡಿಕ್ಕಿ ಕೊಂದಿರುವ ಘಟನೆ ಬಿಹಾರದ ನಳಂದ ಜಿಲ್ಲೆಯಲ್ಲಿ ನಡೆದಿದೆ.
ಸುದಯ್ ಯಾದವ್ (25) ಹತ್ಯೆಯಾದ ಯೋಧ. ಇವರು ಐಎಎಫ್‍ನಲ್ಲಿ ತಂತ್ರಜ್ಞ ಯೋಧರಾಗಿ ಕಾರ್ಯನಿರ್ವಹಿಸುತ್ತಿದ್ದರು. ಕರ್ನಾಟದಲ್ಲಿ ಇವರನ್ನು ಸೇವೆಗೆ ನಿಯೋಜಿಸಲಾಗಿತ್ತು.
ನಳಂದ ಜಿಲ್ಲೆಯ ಬಿಹಾರ್ ಷಹರ್ ಪೆÇಲೀಸ್ ಠಾಣೆ ವ್ಯಾಪ್ತಿಯ ಬಸವಂಡಿಗಹಾ ಗ್ರಾಮದಲ್ಲಿ ಈ ಹತ್ಯೆ ನಡೆದಿದೆ.
ರಜೆ ಮೇಲೆ ಕರ್ನಾಟಕದಿಂದ ಇವರು ತಮ್ಮ ಸ್ವಗ್ರಾಮಕ್ಕೆ ಬಂದಿದ್ದರು. ಗುರುವಾರ ರಾತ್ರಿ ಅರವಿಂದ ಯಾದವ್ ಮತ್ತು ಇಗರ ಮೂವರು ಸುದಯ್ ಮನೆ ಮೇಲೆ ದಾಳಿ ನಡೆಸಿ ಗುಂಡು ಹಾರಿಸಿ ಪರಾರಿಯಾದರು. ತೀವ್ರ ಗಾಯಗೊಂಡ ಅವರು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಕೊನೆಯುಸಿರೆಳೆದರು ಎಂದು ಪೆÇಲೀಸರು ತಿಳಿಸಿದ್ದಾರೆ. ಆರೋಪಿಗಳು ಪರಾರಿಯಾಗಿದ್ದು, ಪೆÇಲೀಸರು ಶೋಧ ಮುಂದುವರಿಸಿದ್ದಾರೆ.