ಬಿಬಿಎಂಪಿ ರೋಡ್ ರೋಲರ್ ಹರಿದು ಸೈಕಲ್ ತುಳಿಯುತ್ತಿದ್ದ ಬಾಲಕ ಮೃತಪಟ್ಟ ಘಟನೆ ಹಿನ್ನೆಲೆಯಲ್ಲಿ ಸಹಾಯಕ ಅಭಿಯಂತ ದಯಾನಂದ್ ಅವರನ್ನು ಅಮಾನತುಪಡಿಸಲು ಮೇಯರ್ ಸಂಪತ್‍ರಾಜ್ ಅವರು ಆಯುಕ್ತ ಮಹೇಶ್ವರರಾವ್ ಅವರಿಗೆ ಸೂಚನೆ

 

ಬೆಂಗಳೂರು, ಮೇ 26- ಬಿಬಿಎಂಪಿ ರೋಡ್ ರೋಲರ್ ಹರಿದು ಸೈಕಲ್ ತುಳಿಯುತ್ತಿದ್ದ ಬಾಲಕ ಮೃತಪಟ್ಟ ಘಟನೆ ಹಿನ್ನೆಲೆಯಲ್ಲಿ ಸಹಾಯಕ ಅಭಿಯಂತ ದಯಾನಂದ್ ಅವರನ್ನು ಅಮಾನತುಪಡಿಸಲು ಮೇಯರ್ ಸಂಪತ್‍ರಾಜ್ ಅವರು ಆಯುಕ್ತ ಮಹೇಶ್ವರರಾವ್ ಅವರಿಗೆ ಸೂಚನೆ ನೀಡಿದ್ದಾರೆ.
ಚಾಲಕನ ಬೇಜವಾಬ್ದಾರಿತನದಿಂದ ಈ ರೀತಿಯ ಘಟನೆ ನಡೆದಿದೆ. ಮುಂದಿನ ದಿನಗಳಲ್ಲಿ ಇಂತಹ ಅವಘಡಗಳು ಪುನರಾವರ್ತಿಸಿದರೆ ಅಧಿಕಾರಿಗಳನ್ನೇ ನೇರ ಹೊಣೆ ಮಾಡಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
5 ಲಕ್ಷ ಪರಿಹಾರ: ಹೆಮ್ಮಿಗೆಪುರ ಅವಘಡದಲ್ಲಿ ಮೃತಪಟ್ಟ ಮನು ಕುಟುಂಬವರ್ಗದವರಿಗೆ 5 ಲಕ್ಷ ರೂ. ಪರಿಹಾರ ಧನ ನೀಡಲಾಗುವುದು ಎಂದು ಮೇಯರ್ ಸಂಪತ್‍ರಾಜ್ ಘೋಷಿಸಿದ್ದಾರೆ.
ಏನಿದು ಅವಘಡ..? ಹೆಮ್ಮಿಗೆಪುರ ವಾರ್ಡ್‍ನಲ್ಲಿ ರಸ್ತೆ ಕಾಮಗಾರಿ ನಡೆಸುವ ವೇಳೆ ಜಲ್ಲಿಕಲ್ಲು ಸಮ ಮಾಡುವ ಯಂತ್ರ ಹರಿದ ಪರಿಣಾಮ 11 ವರ್ಷದ ಮನು ಎಂಬ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದ.
ಬನಶಂಕರಿ 6ನೆ ಹಂತ, ಗಾಣಿಗರ ಪಾಳ್ಯದಲ್ಲಿ ಸೈಕಲ್ ತುಳಿದುಕೊಂಡು ಬರುತ್ತಿದ್ದ ಮನುವನ್ನು ಗಮನಿಸದ ಚಾಲಕ ರೋಡ್‍ರೋಲರ್‍ಅನ್ನು ಬೇಜವಾಬ್ದಾರಿತನದಿಂದ ಹಿಮ್ಮುಖವಾಗಿ ಚಲಾಯಿಸಿ ಸೈಕಲ್ ಮೇಲೆ ಹರಿಸಿದ ಪರಿಣಾಮ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, ಕೆಎಸ್ ಲೇಔಟ್ ಸಂಚಾರಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ