
ಬೆಂಗಳೂರು,ಮೇ 27
ಸಾವಿರಾರು ಸಸಿಗಳನ್ನು ರಸ್ತೆ ಬದಿಯಲ್ಲಿ ನೆಟ್ಟು ಅದನ್ನೇ ತನ್ನ ಮಕ್ಕಳು ಎಂದು ಬಾವಿಸಿ ಪೋಷಿಸಿದ ಸಾಲು ಮರದ ತಿಮ್ಮಕ್ಕ ನಿಧನರಾದರೆಂದು ಸುದ್ದಿಯೊಂದು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ. ಆದರೆ ಇದು ಸುಳ್ಳುಸುದ್ದಿ ಎಂದು ಅವರ ಮಗ ಉಮೇಶ್ ವನಸಿರಿ ಸ್ಪಷ್ಟಪಡಿಸಿದ್ದಾರೆ.
ಬೇಲೂರಲ್ಲಿ ಈಗಷ್ಟೆ ಊಟ ಮಾಡಿದ ಅವರು, ತಾಂಬೂಲ ಸೇವಿಸುತ್ತಿದ್ದಾರೆ, ಅವರು ಆರೋಗ್ಯವಾಗಿದ್ದಾರೆ. ಕಿಡಿಗೇಡಿಗಳು ತಮಗೆ ತೊಂದರೆ ನೀಡುವ ಸಲುವಾಗಿ ಈ ರೀತಿಯ ಸುಳ್ಳುಸುದ್ದಿ ಗಳನ್ನು ಹಬ್ಬಿಸಿದ್ದಾರೆ ಎಂದು ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.
ಪರಿಸರವಾದಿ ಸಾಲು ಮರದ ತಿಮ್ಮಕ್ಕ ಇನ್ನಿಲ್ಲ ಎಂದು ವಾಟ್ಸ್ ಆ್ಯಪ್ ಹಾಗೂ ಫೇಸ್ ಬುಕ್ ನಲ್ಲಿ ಮೃತದೇಹದ ಚಿತ್ರದ ಜತೆಗೆ ಸುದ್ದಿಯೊಂದು ಹರಿದಾಡುತ್ತಿದೆ.