
ಹೊಸದಿಲ್ಲಿ,ಮೇ 27
ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರದ 4 ನೇ ವರ್ಷದ ಸಂಭ್ರಮದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರು ಸರಣಿ ಟ್ವೀಟ್ಗಳ ಮೂಲಕ ತಮ್ಮ ಸರ್ಕಾರದ ಉದ್ದೇಶ ಮತ್ತು ಗುರಿಯ ಬಗ್ಗೆ ಬರೆದುಕೊಂಡಿದ್ದಾರೆ.
”2014 ರ ಈ ದಿನ ನಾವು ಭಾರತದ ರೂಪಾಂತರದ ಕಡೆಗೆ ಕೆಲಸ ಮಾಡುವ ನಮ್ಮ ಪ್ರಯಾಣವನ್ನು ನಾವು ಆರಂಭಿಸಿದ್ದೇವು. ಕಳೆದ ನಾಲ್ಕು ವರ್ಷಗಳಲ್ಲಿ, ಅಭಿವೃದ್ಧಿ ಎನ್ನುವುದು ರೋಮಾಂಚನಕಾರಿ ಚಳವಳಿಯಾಗಿ ಮಾರ್ಪಟ್ಟಿದೆ. ಪ್ರತೀ ಭಾರತೀಯನೂ ಪ್ರಗತಿ ಪಥದಲ್ಲಿ ಸೇರಿಕೊಂಡಿರುವ ಭಾವನೆಯನ್ನು ಹೊಂದಿದ್ದಾನೆ. 125 ಕೋಟಿ ಭಾರತೀಯರು ಭಾರತವನ್ನು ದೊಡ್ಡ ಎತ್ತರಕ್ಕೆ ಕೊಂಡೊಯ್ಯುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನೊಂದು ಟ್ವೀಟ್ನಲ್ಲಿ ”ನಮ್ಮ ಸರ್ಕಾರದ ಮೇಲಿರಿಸಿರುವ ನಂಬಿಕೆಗಾಗಿ ನಾನು ನನ್ನ ಜನತೆಗೆ ತಲೆ ಬಾಗಿ ನಮಿಸುತ್ತೇನೆ. ಈ ಮಟ್ಟದ ಬೆಂಬಲ ಮತ್ತು ಪ್ರೀತಿ ಸಂಪೂರ್ಣ ಸರ್ಕಾರಕ್ಕೆ ಪ್ರೇರಣೆ ಹಾಗೂ ಬಲದ ದೊಡ್ಡ ಮೂಲವಾಗಿದೆ. ನಾವು ಭಾರತದ ಜನರಿಗೆ ಅದೇ ಚಟುವಟಿಕೆಯಿಂದ ಸಮರ್ಪಣೆಯನ್ನು ಮುಂದುವರಿಸುತ್ತೇವೆ” ಎಂದು ಬರೆದಿದ್ದಾರೆ.
ಮತ್ತೊಂದು ಟ್ವೀಟ್ನಲ್ಲಿ ”ನಮಗೆ ಯಾವಾಗಲೂ ಭಾರತ ಮೊದಲನೆಯದು. ನಾವು ಸದುದ್ದೇಶ ಮತ್ತು ಸಂಪೂರ್ಣ ಸಮಗ್ರತೆಯೊಂದಿಗೆ ಹೊಸ ಭಾರತದ ಅಡಿಪಾಯವನ್ನು ಹಾಕುತ್ತಿದ್ದು, ಭವಿಷ್ಯದ ಮತ್ತು ಜನರ ಸ್ನೇಹಿ ನಿರ್ಧಾರಗಳನ್ನು ತೆಗೆದುಕೊಂಡಿದ್ದೇವೆ.” ಎಂದು ಬರೆದಿದ್ದಾರೆ.