
ಬೆಂಗಳೂರು, ಮೇ 26- ಬಾವಿಯಲ್ಲಿ ಈಜಲು ಹೋಗಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಜಿಗಣಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೃತಪಟ್ಟ ವಿದ್ಯಾರ್ಥಿಯನ್ನು ಪ್ರವೀಣ್ (24) ಎಂದು ಗುರುತಿಸಲಾಗಿದೆ.
ಪ್ರವೀಣ್ ತನ್ನ ಐದು ಜನ ಸ್ನೇಹಿತರೊಂದಿಗೆ ಬರ್ತ್ಡೇ ಪಾರ್ಟಿ ಆಚರಿಸಲು ಆನೆಕಲ್ ಸಮೀಪದ ಹಾರಗದ್ದೆಯ ಸೀತನಾಯ್ಕನಹಳ್ಳಿಗೆ ತೆರಳಿ ಮೋಜುಮಸ್ತಿಯಲ್ಲಿ ತೊಡಗಿದ್ದ ಎನ್ನಲಾಗಿದೆ.
ಮೋಜುಮಸ್ತಿಯ ಹುಮ್ಮಸ್ಸಿನಲ್ಲಿದ್ದ ಸ್ನೇಹಿತರು ಸಮೀಪದಲ್ಲೇ ಇದ್ದ ಬಾವಿಯಲ್ಲಿ ಈಜಾಡಲು ತೆರಳಿದ್ದರು. ಈಜು ಬಾರದಿದ್ದರೂ ಪ್ರವೀಣ್ ಬಾವಿಗೆ ದುಮುಕಿದ ಪರಿಣಾಮ ನೀರಿನಲ್ಲಿ ಮುಳುಗಿ ಸಾವನ್ನಪ್ಪದ್ದಾನೆ ಎಂದು ಪೆÇಲೀಸರು ತಿಳಿಸಿದ್ದಾರೆ.
ಜಿಗಣಿ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ.