
ಹಾಸನ, ಮೇ 26-ಬೈಕ್ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ಕೆಂಚಟ್ಟಹಳ್ಳಿ ಬಳಿ ನಡೆದಿದೆ. ಹಾಸನದ ಧರ್ಮಪ್ರಕಾಶ್(55) ಮೃತಪಟ್ಟವರು.
ಮಗಳ ವರ್ಗಾವಣೆ ಪತ್ರ ತರಲು ಎಚ್.ಕೆ.ಎಸ್. ಕಾಲೇಜಿಗೆ ತೆರಳಿದ್ದಾಗ ಘಟನೆ ಸಂಭವಿಸಿದೆ,ತಂದೆ ಜೊತೆಗೆ ತೆರಳಿದ್ದ ಪುತ್ರಿ ಪ್ರಿಯಾಂಕ ಅಪಾಯದಿಂದ ಪಾರಾಗಿದ್ದಾಳೆ.
ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಈ ಘಟನೆ ನಡೆದಿದೆ, ಶಾಲೆ ಕಡೆಯಿಂದ ರಸ್ತೆಗೆ ಬರುವವೇಳೆಗೆ ಬೆಂಗಳೂರು ಕಡೆಯಿಂದ ಬಂದ ಕಾರು ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ.
ಹಾಸನ ಟ್ರಾಫಿಕ್ ಪೆÇಲೀಸ್ ಠಾಣೆ ಪ್ರಕರಣ ದಾಖಲಾಗಿದೆ.