ಸೂರತ್‍ನ ಲೇಡಿ ಡಾನ್ ಎಂದೇ ಕುಪ್ರಸಿದ್ಧಿಯಾಗುವ ಅಸ್ಮಿಕಾ ಗೋಹಿಲ್ ಅಲಿಯಾಸ್ ಭುರಿ ಈಗ ಮತ್ತೆ ಪೆÇಲೀಸ್‍ರ ಅತಿಥಿ

ಸೂರತ್, ಮೇ 26- ಬಾಲಿವುಡ್ ತಾರೆಯರನ್ನೇ ನಾಚಿಸುವ ಸುರಸುಂದರಿ ಈಕೆ. ಆದರೆ ಇವರು ಕುಖ್ಯಾತ ಕ್ರಿಮಿನಲ್, ಸೂರತ್‍ನ ಲೇಡಿ ಡಾನ್ ಎಂದೇ ಕುಪ್ರಸಿದ್ಧಿಯಾಗುವ ಅಸ್ಮಿಕಾ ಗೋಹಿಲ್ ಅಲಿಯಾಸ್ ಭುರಿ ಈಗ ಮತ್ತೆ ಪೆÇಲೀಸ್‍ರ ಅತಿಥಿಯಾಗಿದ್ದಾರೆ.
ತನ್ನ ಗೆಳೆಯನೊಂದಿಗೆ ಲಾಂಗ್ ಝಳಪಿಸುತ್ತಾ ಅಂಗಡಿಯೊಂದಕ್ಕೆ ನುಗ್ಗಿ ಮಾಲೀಕನಿಗೆ ಪ್ರಾಣ ಬೆದರಿಕೆ ಹಾಕಿ, ಹಣ ಲೂಟಿ ಮಾಡಿದ್ದಳು. ಈ ಕೃತ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಎಚ್ಚೆತ್ತುಕೊಂಡ ಲೇಡಿ ಡಾನ್‍ರನ್ನು ವಾರಚ ಠಾಣೆ ಪೆÇಲೀಸರು ಬಂಧಿಸಿದ್ದಾರೆ.
ಚೆಲುವಿನ ಚಿನ್ನಾರಿಯಾಗಿರುವ ಇವಳು ಹೆಮ್ಮಾರಿ, ಹಣಸುಲಿಗೆ, ಲೂಟಿ, ಪ್ರಾಣಬೆದರಿಕೆ, ಬೈಕ್ ಕಳವು ಸೇರಿದಂತೆ ಅನೇಕ ಅಪರಾಧ ಕೃತ್ಯಗಳಲ್ಲಿ ಈಕೆ, ಶಾಮೀಲಾಗಿದ್ದಾಳೆ ವಾರಚ ಪೆÇಲೀಸ್ ಠಾಣೆಯ ರೌಡಿ ಶೀಟರ್ ಈಕೆ ಬಾಲಿವುಡ್ ನಟಿಯರಂತೆ ಅತ್ಯಂತ ಫ್ಯಾಷನ್ ಉಡುಪು ಮತ್ತು ಸನ್‍ಗ್ಲಾಸ್ ಧರಿಸಿ ಈಕೆ ಬೈಕ್ ಏರಿ ಹೊರಟರೇ ಅಲ್ಲಿ ಒಂದು ಅಪರಾಧ ಕೃತ್ಯ ನಡೆಯುತ್ತದೆ ಎಂದೇ ಅರ್ಥ.
ಗ್ಲಾಮರ್ ಖನಿಯಾಗಿರುವ ಅಸ್ಮಿಕಾ ಅಲಿಯಾಸ್ ಭುರಿಗೆ ಬೈಕ್‍ಗಳ ಕ್ರೇಜ್, ಅತ್ಯಂತ ವೇಗವಾಗಿ ದ್ವಿಚಕ್ರವಾಹನಗಳನ್ನು ಚಾಲನೆ ಮಾಡುವುದು ಈಕೆಗೆ ಫ್ಯಾಷನ್. ಸೂರತ್ ಮಂದಿ ಈಕೆಯನ್ನು ನೋಡಿ ಹೆದರುತ್ತಾರೆ, ಹಲವಾರು ಬಾರಿ ಬಂಧನಕ್ಕೆ ಒಳಗಾಗಿರುವ ಈಕೆ ವಿರುದ್ದ ಅನೇಕ ಕೇಸ್‍ಗಳಿವೆ.
ಕಳೆದ ವಾರ ಭುರಿ ಬೈಕ್‍ನನ್ನು ಕದ್ದಿದ್ದಳು, ಈಗ ಮತ್ತೆ ಪೆÇಲೀಸರ ಅತಿಥಿಯಾಗಿದ್ದಾಳೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ